varthabharthi


ಕರಾವಳಿ

ಬಾಲಕಿಯ ಅತ್ಯಾಚಾರವೆಸಗಿ ಕೊಂದವರಿಗೆ ಕಠಿಣ ಶಿಕ್ಷೆ ನೀಡಿ: ಪೊಲೀಸ್ ಆಯುಕ್ತರಿಗೆ 4ನೆ ತರಗತಿಯ ವಿದ್ಯಾರ್ಥಿನಿ ಒತ್ತಾಯ

ವಾರ್ತಾ ಭಾರತಿ : 25 Nov, 2021

ಮಂಗಳೂರು, ನ. 25: ಉಳಾಯಿಬೆಟ್ಟು ಸಮೀಪದ ಪರಾರಿಯ ಹಂಚಿನ ಕಾರ್ಖಾನೆಯಲ್ಲಿ 8 ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಂದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿ 4ನೆ ತರಗತಿಯ ವಿದ್ಯಾರ್ಥಿನಿ ಪೊಲೀಸ್ ಆಯುಕ್ತರಿಗೆ ಮನವಿ ಪತ್ರವೊಂದನ್ನು ಖುದ್ದು ನೀಡಿ ಒತ್ತಾಯಿಸಿದ್ದಾಳೆ.

ಕುಳಾಯಿಯ ನಿರಂಜನ್ ಹಾಗೂ ಪವಿತ್ರ ದಂಪತಿಯ ಪುತ್ರಿ ಚಾರ್ವಿ ನಿರಂಜನ್ ತನ್ನ ಪೋಷಕರೊಂದಿಗೆ ಇಂದು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ‘‘ಬಾಲಕಿಗೆ ನ್ಯಾಯ ಸಿಗಬೇಕು ಹಾಗೂ ನನ್ನಂತಹ ಮಕ್ಕಳಿಗೆ ರಕ್ಷಣೆ ಸಿಗಬೇಕು ಎಂದು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರನ್ನು ಒತ್ತಾಯಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)