ಸೌದಿ ಅರೆಬಿಯಾ : ಹೊಸ ಹೂಡಿಕೆ 20% ವೃದ್ಧಿ
ರಿಯಾದ್, ನ.25: 2021ರ ದ್ವಿತೀಯ ತ್ರೈಮಾಸಿಕದಲ್ಲಿ ಸೌದಿ ಅರೆಬಿಯಾದ ನೂತನ ಹೂಡಿಕೆಯಲ್ಲಿ 20% ಪ್ರಗತಿ ದಾಖಲಾಗಿದೆ ಎಂದು ಸರಕಾರದ ವರದಿ ಹೇಳಿದೆ.
ಇದರೊಂದಿಗೆ ಸತತ 3 ತ್ರೈಮಾಸಿಕ ಅವಧಿಯಲ್ಲಿ ನೂತನ ಹೂಡಿಕೆಯಲ್ಲಿ ಪ್ರಗತಿ ದಾಖಲಾಗಿದೆ ಎಂದು ಸೌದಿ ಅರೆಬಿಯಾದ ಹೂಡಿಕೆ ಸಚಿವಾಲಯ ವರದಿಯಲ್ಲಿ ತಿಳಿಸಿದೆ. ದ್ವಿತೀಯ ತ್ರೈಮಾಸಿಕ ಅವಧಿಯಲ್ಲೇ ಸೌದಿ ಅರೆಬಿಯಾ 575 ಹೊಸ ಹೂಡಿಕೆಗೆ ಲೈಸೆನ್ಸ್ ಮಂಜೂರುಗೊಳಿಸಿದ್ದು ಇದರಲ್ಲಿ 46%ದಷ್ಟು ಸೌದಿ ಅರೆಬಿಯಾ ಮತ್ತು ವಿದೇಶಿ ಸಹಭಾಗಿಗಳ ಜಂಟಿ ಹೂಡಿಕೆಯಾಗಿದೆ ಎಂದು ವರದಿ ಹೇಳಿದೆ.
Next Story