ಡಿ.1: ವಿದ್ಯುತ್ ವ್ಯತ್ಯಯ
ಮಂಗಳೂರು, ನ.30: ನಗರದ ನೆಹರೂ ಮೈದಾನ ಉಪಕೇಂದ್ರದಿಂದ ಹೊರಡುವ ಫೀಡರ್ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಓಎಸ್ ದುರಸ್ತಿ ಕಾಮಗಾರಿ ಕೈಗೊಳ್ಳಲಾಗಿದೆ.
ಹಾಗಾಗಿ ಡಿ.1ರ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಬಂದರು ಪೊಲೀಸ್ ಸ್ಟೇಷನ್, ಗಾಂಧಿ ಸನ್ಸ್, ನೂರ್ ಮುಹಮ್ಮದ್, ಅಝೀಝುದ್ದೀನ್ ರಸ್ತೆ, ಚೇಂಬರ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟನೆ ತಿಳಿಸಿದೆ.
Next Story