varthabharthi


ಸಿನಿಮಾ

ವೈಆರ್ ಎಫ್ ನ ವೆಬ್ ಸರಣಿಯಲ್ಲಿ ಆರ್.ಮಾಧವನ್, ಕೇಕೇ ಮೆನನ್ ಜೊತೆ ನಟಿಸಲಿರುವ ಇರ್ಫಾನ್ ಖಾನ್ ಪುತ್ರ ಬಾಬಿಲ್ ಖಾನ್

ವಾರ್ತಾ ಭಾರತಿ : 2 Dec, 2021

ಮುಂಬೈ: ಚಿತ್ರರಂಗಕ್ಕೆ ಇನ್ನಷ್ಟೇ ಪಾದಾರ್ಪಣೆ ಮಾಡಬೇಕಾಗಿರುವ ಇರ್ಫಾನ್ ಖಾನ್ ಅವರ ಪುತ್ರ ಬಾಬಿಲ್ ಖಾನ್ ಮತ್ತೊಂದು ಉತ್ತಮ ಪ್ರಾಜೆಕ್ಸ್ ಅನ್ನು ಪಡೆದುಕೊಂಡಿದ್ದಾರೆ. ಯಶ್ ರಾಜ್ ಫಿಲ್ಮ್ಸ್  (ವೈಆರ್ ಎಫ್) ಮೊದಲ  ಒಟಿಟಿ ಪ್ರಾಜೆಕ್ಟ್ ‘ದಿ ರೈಲ್ವೇ ಮೆನ್’ ನಲ್ಲಿ ಆರ್.ಮಾಧವನ್, ಕೇ ಕೇ ಮೆನನ್ ಹಾಗೂ  ದಿವ್ಯೇಂದು ಶರ್ಮಾ ಅವರೊಂದಿಗೆ ಬಾಬಿಲ್ ಖಾನ್ ನಟಿಸಲಿದ್ದಾರೆ.

‘ರೈಲ್ವೇ ಮೆನ್’ ವೆಬ್ ಸರಣಿಯು 1984 ರ ಭೋಪಾಲ್ ಅನಿಲ ದುರಂತದ ಎಲೆಮರೆಯ ವೀರರಿಗೆ ಶ್ರದ್ದಾಂಜಲಿ ಆಗಿದೆ. 37 ವರ್ಷಗಳ ಹಿಂದೆ ಭೋಪಾಲ್ ನಲ್ಲಿ ಈ ದುರಂತ ಸಂಭವಿಸಿದ ದಿನದಂದೇ ವೈಆರ್ ಎಫ್  ಈ ಯೋಜನೆಯನ್ನು ಘೋಷಿಸಿತು. 

ಈ ವೆಬ್ ಸರಣಿಯನ್ನು ಮೊದಲ ಬಾರಿ ಶಿವ್ ರಾವೈಲ್ ನಿರ್ದೇಶಿಸುತ್ತಿದ್ದು, ಇವರಿಗೆ ಆದಿತ್ಯ ಚೋಪ್ರಾ ಮಾರ್ಗದರ್ಶನ ನೀಡುತ್ತಿದ್ದಾರೆ.

View this post on Instagram

A post shared by Babil (@babil.i.k)

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)