varthabharthi


ನಿಧನ

ಯಶವಂತಪುರ ವಸಂತ ನೊಂಡ

ವಾರ್ತಾ ಭಾರತಿ : 3 Dec, 2021

ಮಂಗಳೂರು, ಡಿ.3: ಎಂಸಿಎಫ್ ನಿವೃತ್ತ ಉದ್ಯೋಗಿ, ಕರಾಟೆಪಟು, ಬೆಂಗಳೂರು ಯಶವಂತಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಜೋಗಿಬೆಟ್ಟು ವಸಂತ ನೋಂಡ (71) ಶುಕ್ರವಾರ ನಿಧನರಾಗಿದ್ದಾರೆ.

ಮೃತರು ಪತ್ನಿ, ಮೂವರು ಪುತ್ರರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಬೆಂಗಳೂರು ಯಶವಂತಪುರ ಕೈಗಾರಿಕಾ ಪ್ರದೇಶದಲ್ಲಿ ಅ್ಯಂಮ್ಕೊ ಬ್ಯಾಟರೀಸ್ ಉದ್ಯೋಗಿಯಾಗಿದ್ದ ಅವರು ಯಶವಂತಪುರ ನೊಂಡ ಅಂತಲೇ ಗುರುತಿಸಿಕೊಂಡಿದ್ದರು. ಬೆಂಗಳೂರಿನಲ್ಲಿ ಕಾರ್ಮಿಕ ಸಂಘಟನೆಯಲ್ಲಿ ತೊಡಗಿದ್ದ ಅವರ ಸಂಘಟನಾ ಸಾಮರ್ಥ್ಯ ವನ್ನು ಗಮನಿಸಿ ಅವರನ್ನು ಯಶವಂತಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.

ಮಂಗಳೂರಿನ ಎಂಸಿಎಫ್ ರಸಗೊಬ್ಬರ ಕಾರ್ಖಾನೆಯಲ್ಲಿ ಬಾಯ್ಲರ್ ಅಪರೇಟರ್ ಆಗಿದ್ದ ಅವರು ನಿವೃತ್ತಿಯ ಬಳಿಕ ದೈವಸ್ಥಾನ, ದೇವಸ್ಥಾನಗಳ ಜೀರ್ಣೋದ್ದಾರ ಸೇರಿದಂತೆ ಅನೇಕ ಸಮಾಜ ಸೇವಾ ಕಾರ್ಯದಲ್ಲಿ ತೊಡಗಿದ್ದರು.

ವಸಂತ ನೊಂಡ ಅವರ ನಿಧನಕ್ಕೆ ಸಚಿವ ಅಶ್ವತ್ಥ ನಾರಾಯಣ, ಮಾಜಿ ಸಚಿವ ರಮಾನಾಥ ರೈ, ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ಸಂತಾಪ ಸೂಚಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಟಾಪ್ ಸುದ್ದಿಗಳು