ಸೌದಿಯಲ್ಲಿ ಅಪಘಾತ: ಮೂವರು ಮಕ್ಕಳು ಸಹಿತ ಕೇರಳದ ಒಂದೇ ಕುಟುಂಬದ ಐವರು ಮೃತ್ಯು
ಸೌದಿ ಅರೇಬಿಯಾದ ಬಿಶಾ ಪ್ರಾಂತ್ಯದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಕೇರಳದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ ಎಂದು onmanorama.com ವರದಿ ಮಾಡಿದೆ.
ಮೃತರನ್ನು ಮುಹಮ್ಮದ್ ಜಾಬೀರ್ (48), ಅವರ ಪತ್ನಿ ಶಬ್ನಾ (36) ಮತ್ತು ಮಕ್ಕಳಾದ ಸೈಬಾ (7), ಸಹಾ (5) ಮತ್ತು ಲುತ್ಫಿ ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿ ಕುಟುಂಬ ಸಮೇತರಾಗಿ ಜುಬೈಲ್‌ನಿಂದ ಜಿಝಾನ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಮಾರ್ಗಮಧ್ಯೆ ಅವರ ವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.
ಉದ್ಯೋಗ ಬದಲಾವಣೆಯ ನಂತರ ಜಾಬೀರ್ ಜಿಝಾನ್‌ಗೆ ಸ್ಥಳಾಂತರಗೊಂಡಿದ್ದರು ಎಂದು ವರದಿಯಾಗಿದೆ.
ಜಾಬೀರ್ ಮತ್ತು ಕುಟುಂಬ ಕೇರಳದ ಕೋಝಿಕ್ಕೋಡ್ ಮೂಲದವರಾಗಿದ್ದಾರೆ ಎಂದು ತಿಳಿದು ಬಂದಿದೆ.
Next Story