ರೈಲು ಢಿಕ್ಕಿ ಹೊಡೆದು ವೃದ್ಧ ಮೃತ್ಯು
ಕುಂದಾಪುರ, ಡಿ.5: ರೈಲ್ವೆ ಹಳಿ ದಾಟುತ್ತಿದ್ದ ವೃದ್ಧರೊಬ್ಬರು ಚಲಿಸುವ ರೈಲು ಹೊಡೆದು ಮೃತಪಟ್ಟ ಘಟನೆ ಡಿ.4ರಂದು ರಾತ್ರಿ ವೇಳೆ ಕನ್ಯಾನ ಗ್ರಾಮದ ಕೊರ್ಗಿ ಎಂಬಲ್ಲಿ ನಡೆದಿದೆ.
ಮೃತರನ್ನು ಕನ್ಯಾನ ರಾಜಡಿ ಕಳಿ ಮನೆ ನಿವಾಸಿ ಅಣ್ಣಪ್ಪಶೆಟ್ಟಿ (92) ಎಂದು ಗುರುತಿಸಲಾಗಿದೆ. ಇವರು ಮನೆಯಿಂದ ಮೂಲ ಮನೆಯಾದ ಕೊರ್ಗಿಗೆ ಹೋಗಿದ್ದು, ದಾರಿ ಮಧ್ಯೆ ರೈಲ್ವೆ ಹಳಿ ದಾಟುತ್ತಿದ್ದಾಗ ಚಲಿಸುವ ರೈಲು ಹೊಡೆಯಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಗ್ರಾಮಾತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story