varthabharthi


ಕರಾವಳಿ

ಬೈಂದೂರು: ವಾಹನಕ್ಕೆ ಕಟ್ಟಿ ಜಾನುವಾರು ಎಳೆದೊಯ್ದ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

ವಾರ್ತಾ ಭಾರತಿ : 6 Dec, 2021

ಬೈಂದೂರು, ಡಿ.6: ಅಪಘಾತದಿಂದ ಗಾಯಗೊಂಡ ಜಾನುವಾರುಗಳನ್ನು ವಾಹನಕ್ಕೆ ಕಟ್ಟಿ ಎಳೆದುಕೊಂಡು ಹೋದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುತ್ತಿಗೆ ಸಂಸ್ಥೆ ಐಆರ್‌ಬಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲೆಯ ಭಟ್ಕಳ ತಾಲೂಕು ಬೆಳ್ಕೆ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಐಆರ್‌ಬಿ ಅಧಿಕಾರಿ ಪ್ರಪುಲ್ಲ ಕಾಕಡೆ ಹಾಗೂ ಸಿಬ್ಬಂದಿ ಡಿ.5ರಂದು ಮಧ್ಯಾಹ್ನ ಅಪಘಾತದಲ್ಲಿ ಗಾಯಗೊಂಡ ಎರಡು ಗೋವುಗಳ ಕಾಲುಗಳನ್ನು ಹಗ್ಗದಿಂದ ಅಮಾನುಷವಾಗಿ ಕಟ್ಟಿ, ಐಆರ್‌ಬಿ ಕಂಪೆನಿಗೆ ಸೇರಿದ ವಾಹನದಲ್ಲಿ ಹಿಂಸಾತ್ಮಕವಾಗಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವುದಾಗಿ ಬೈಂದೂರು ಬಂಕೇಶ್ವರದ ಪ್ರಾಂತ್ ಮೊಯ್ಲಿ ದೂರಿನಲ್ಲಿ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)