varthabharthi


ರಾಷ್ಟ್ರೀಯ

ದಿಲ್ಲಿ ವಿಧಾನ ಸಭೆ ಸಮಿತಿ ಮುಂದೆ ಹಾಜರಾಗಲು ಕಾಲಾವಕಾಶ ಕೋರಿದ ನಟಿ ಕಂಗನಾ

ವಾರ್ತಾ ಭಾರತಿ : 6 Dec, 2021

ಹೊಸದಿಲ್ಲಿ, ಡಿ. 6: ಸಾಮಾಜಿಕ ಜಾಲ ತಾಣದಲ್ಲಿ ಸಿಖ್ಖ್ ಸಮುದಾಯದ ವಿರುದ್ಧ ವಿವಾದಾತ್ಮಕ ಹಾಗೂ ಮಾನಹಾನಿಕರ ಹೇಳಿಕೆ ನೀಡಿದ ಕುರಿತಂತೆ ದಿಲ್ಲಿ ವಿಧಾನ ಸಭೆಯ ಶಾಂತಿ ಹಾಗೂ ಸಾಮರಸ್ಯ ಸಮಿತಿ ಮುಂದೆ ಹಾಜರಾಗಲು ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಮತ್ತಷ್ಟು ಕಾಲಾವಕಾಶ ಕೋರಿದ್ದಾರೆ.

ಕಂಗನಾ ರಣಾವತ್ ಅವರ ವಕೀಲರು ಪತ್ರದಲ್ಲಿ ವೈಯುಕ್ತಿಕ ಹಾಗೂ ವೃತ್ತಿಪರ ಬದ್ಧತೆಗಳ ಕಾರಣಕ್ಕೆ ರಣಾವತ್ ಅವರಿಗೆ ಸಮಿತಿಯ ಮುಂದೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ. ಕಂಗನಾ ರಣಾವತ್ ಅವರು ಮತ್ತಷ್ಟು ಕಾಲಾವಕಾಶ ಕೋರಿದ್ದಾರೆ. ಇಂದಿನ ಸಭೆ ರದ್ದುಗೊಳಿಸಲಾಗಿದೆ. ಸಮಿತಿ ತನ್ನ ನಿರ್ಧಾರವನ್ನು ಅವರಿಗೆ ಪತ್ರದ ಮೂಲಕ ತಿಳಿಸಲಿದೆ ಎಂದು ಸಮಿತಿಯ ಮುಖ್ಯಸ್ಥ ರಾಘವ್ ಚಡ್ಡಾ ಅವರು ತಿಳಿಸಿದ್ದಾರೆ.

ಈಶಾನ್ಯ ದಿಲ್ಲಿಯ ಗಲಭೆ ಬಳಿಕ ನಗರದಲ್ಲಿ ಶಾಂತಿ ಕದಡಲು ಕಾರಣವಾಗಬಹುದಾದ ಘಟನೆಗಳನ್ನು ಪರಿಶೀಲನೆ ನಡೆಸುವ ಉದ್ದೇಶದಿಂದ 2020 ಫೆಬ್ರವರಿಯಲ್ಲಿ ಈ ಸಮಿತಿ ರೂಪಿಸಲಾಗಿದೆ.

ರಣಾವತ್ ಅವರು ಸಿಖ್ಖ್ ರೈತ ಹೋರಾಟಗಾರರನ್ನು ಖಲಿಸ್ತಾನಿಗಳು ಹಾಗೂ ಭಯೋತ್ಪಾದಕರು ಎಂದು ಕರೆದಿದ್ದಾರೆ. ಅವರ ಹೇಳಿಕೆ ಸಾಮರಸ್ಯಕ್ಕೆ ಅಡ್ಡಿ ಉಂಟು ಮಾಡುವ ಉದ್ದೇಶ ಹೊಂದಿದೆ. ಅಲ್ಲದೆ, ಸಿಖ್ಖ್ ಸಮುದಾಯಕ್ಕೆ ಅವಮಾನ ಉಂಟು ಮಾಡಿದೆ ಎಂದು ಸಮನ್ಸ್ನಲ್ಲಿ ಹೇಳಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)