ಆ್ಯಶಸ್ ಟೆಸ್ಟ್ ಪಂದ್ಯ: ಸ್ಟೋಕ್ಸ್ ಎಸೆದಿದ್ದ 14 ನೋ-ಬಾಲ್ ಗಳಲ್ಲಿ ಎರಡಕ್ಕೆ ಛೀಮಾರಿ ಹಾಕಿದ್ದ ಅಂಪೈರ್
ಅಂಪೈರಿಂಗ್ ,ತಂತ್ರಜ್ಞಾನದ ಗುಣಮಟ್ಟ ಟೀಕಿಸಿದ ಪಾಂಟಿಂಗ್
Photo: Video grab
ಬ್ರಿಸ್ಬೇನ್: ಆಸ್ಟ್ರೇಲಿಯ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಆಶಸ್ ಟೆಸ್ಟ್ನ ಎರಡನೇ ದಿನದ ಆಟದಲ್ಲಿ ತಂತ್ರಜ್ಞಾನದ ಸ್ಥಗಿತದ ನಂತರ ಹಲವಾರು ನೋ-ಬಾಲ್ ಗಳು ಕಣ್ತಪ್ಪಿ ಹೋಗಿದ್ದು ಅಂಪೈರಿಂಗ್ನ ಗುಣಮಟ್ಟವನ್ನು ಮತ್ತೊಮ್ಮೆ ಪ್ರಶ್ನಿಸಲಾಗಿದೆ. ಅಂಪೈರಿಂಗ್ ಹಾಗೂ ತಂತ್ರಜ್ಞಾನದ ಗುಣಮಟ್ಟವನ್ನು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಟೀಕಿಸಿದ್ದಾರೆ.
ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಮೊದಲ ಸೆಷನ್ನಲ್ಲಿ 14 ನೋ-ಬಾಲ್ಗಳನ್ನು ಎಸೆದಿದ್ದರು. ಅದರಲ್ಲಿ ಎರಡು ನೋ-ಬಾಲ್ ಗಳನ್ನು ಪತ್ತೆ ಹಚ್ಚಲಾಗಿದೆ. ವೀಡಿಯೊ ಅಂಪೈರ್ಗೆ ನೋ ಬಾಲ್ ಪತ್ತೆಹಚ್ಚಲು ಸಹಾಯ ಮಾಡುವ ಕ್ರೀಸ್ಗೆ ಪಕ್ಕದಲ್ಲಿ ಇರಿಸಲಾಗಿದ್ದ ಕ್ಯಾಮೆರಾಗಳಲ್ಲಿನ ದೋಷ ಇತ್ತು. ಮೊದಲ ಸೆಷನ್ನಲ್ಲಿ ಡೇವಿಡ್ ವಾರ್ನರ್ ಅವರನ್ನು ಬೆನ್ ಸ್ಟೋಕ್ಸ್ ಬೌಲ್ಡ್ ಮಾಡಿದ್ದರು, ಆದರೆ ಅದು ನೋ ಬಾಲ್ ಆಗಿತ್ತು.
ಕ್ಯಾಮೆರಾಗಳಲ್ಲಿನ ದೋಷದಿಂದಾಗಿ ಮೈದಾನದಲ್ಲಿರುವ ಅಂಪೈರ್ಗಳು ನೋ-ಬಾಲ್ ನಿರ್ಧರಿಸಬೇಕಾಗುತ್ತದೆ. ಇದು ಸಾಮಾನ್ಯ ಪ್ರಕರಣವಾಗಿದ್ದು, ವಿಕೆಟ್ ಬಿದ್ದಾಗ ಮೂರನೇ ಅಂಪೈರ್ಗಳು ಮಧ್ಯಪ್ರವೇಶಿಸಿ ನೋ ಬಾಲ್ ಎಸೆತವನ್ನು ಪರಿಶೀಲಿಸಬಹುದು. ಆಸ್ಟ್ರೇಲಿಯಾದ ಜೋಡಿ ಪಾಲ್ ರೀಫೆಲ್ ಹಾಗೂ ರಾಡ್ ಟಕರ್ ಅವರ ಕಳಪೆ ಅಂಪೈರಿಂಗ್ಗಾಗಿ ಟೀಕೆಗೆ ಗುರಿಯಾಗಿದ್ದಾರೆ.