ಡಿ.12ಕ್ಕೆ ಪೆರ್ನೆಯಲ್ಲಿ ಮಹಿಳೆಯರಿಗಾಗಿ ಆರೋಗ್ಯ ಶಿಬಿರ
ಮಹಿಳೆಯರಿಗಾಗಿ ಆರೋಗ್ಯ ಮಾಹಿತಿ ಶಿಬಿರವು ಡಿಸೆಂಬರ್ 12ರ ರವಿವಾರ ಮಧ್ಯಾಹ್ನ 2 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಸುನ್ನಿ ಸೆಂಟರ್ ನಲ್ಲಿ ನಡೆಯಲಿದೆ.
ಪೆರ್ನೆಯ ಎಸ್ ವೈಎಸ್, ಎಸೆಸೆಫ್, ಎಸ್ ಬಿಎಸ್, ಕೆಸಿಎಫ್ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಹೆಲ್ತ್ ಇನ್ಸ್ ಪೆಕ್ಟರ್ (ಆರೋಗ್ಯ ಮತ್ತು ನೈರ್ಮಲ್ಯ ನಿರೀಕ್ಷಕಿ) ಆಯಿಶಾ ಪೆರ್ನೆ ಶಿಬಿರ ನಡೆಸಿಕೊಳ್ಳಲಿದ್ದಾರೆ. ಪೆರ್ನೆ ಸುತ್ತಮುತ್ತಲಿನ ಮಹಿಳೆಯರು ಈ ಶಿಬಿರದಲ್ಲಿ ಭಾಗವಹಿಸಬಹುದು ಎಂದು ಸಂಘಟಕರು ತಿಳಿಸಿದ್ದಾರೆ.
Next Story