ಕಾಪು ಪುರಸಭಾ ಚುನಾವಣೆ: ಎಸ್ಡಿಪಿಐ ಅಭ್ಯರ್ಥಿಗಳ ಪ್ರಥಮ ಪಟ್ಟಿ ಘೋಷಣೆ
ಕಾಪು, ಡಿ.12: ಕಾಪು ಪುರಸಭಾ ಚುನಾವಣೆಯಲ್ಲಿ ಎಸ್ಡಿಪಿಐ ಪಕ್ಷವು ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದ್ದು, ಈ ಸಂಬಂಧ ಅಧಿಕೃತ ಅಭ್ಯರ್ಥಿಗಳನ್ನು ಘೋಷಿಸಿದೆ.
ಕಾಪು ಕೊಂಬಗುಡ್ಡೆಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಅಧಿಕೃತ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಘೋಷಿಸಿದರು. ಬಳಿಕ ಮಾತನಾಡಿದ ಅವರು, ಓಟು ಪಡೆಯುವಾಗ ಕಾಂಗ್ರೆಸ್, ಮತ್ತೆ ಬಿಜೆಪಿಗೆ ಸೇರ್ಪಡೆಗೊಳ್ಳುವ ಈ ಸಂದರ್ಭದಲ್ಲಿ ಜನತೆ ಪ್ರಜ್ಙಾವಂತಿಕೆಯಿಂದ ಮತ ಚಲಾಯಿಸಲು ಜನತೆ ಮರೆಯಬಾರದು ಎಂದು ಹೇಳಿದರು.
ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಲಿ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಪು ವಿಧಾನ ಸಭಾ ಅಧ್ಯಕ್ಷ ಹನೀಫ್ ಮೂಳೂರ್ ವಹಿಸಿದ್ದರು. ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್, ಫಹೀಮ್, ಇಬ್ರಾಹಿಂ ಉಚ್ಚಿಲ ಉಪಸ್ಥಿತರಿದ್ದರು.
ಅಭ್ಯರ್ಥಿಗಳ ವಿವರ
ದುಗನ್ತೋಟ- ಹನೀಫ್ ಮೂಳೂರು, ಮಂಗಳಪೇಟೆ- ವಹೀದಾ ಷರೀಫ್, ಬಡಗರಗುತ್ತು- ನಿಯಾನ್ ಪರ್ವೀನ್, ಕೊಂಬಗುಡ್ಡೆ- ನಝೀರ್ ಅಹ್ಮದ್, ಗುಜ್ಜಿ- ಸರಿತ ಶಿವ, ಜನರಲ್ ಶಾಲೆ- ರುಬೀನ ಶಹಬಾನ್, ಗರಡಿ- ಅಬ್ದುಲ್ ಖಾದರ್, ಕುಡ್ತಿಮಾರ್- ನಝ್ನೀನ್ ಇರ್ಫಾನ್.