varthabharthi


ಸಿನಿಮಾ

ಮತ್ತೆ ಒಂದೇ ಚಿತ್ರದಲ್ಲಿ ದಂಗಲ್ ಹುಡುಗಿಯರು !

ವಾರ್ತಾ ಭಾರತಿ : 14 Dec, 2021

ದಂಗಲ್ ಹುಡುಗಿಯರಾದ ಫಾತಿಮಾ ಸನಾ ಶೇಖ್ ಹಾಗೂ ಸಾನ್ಯ ಮಲ್ಹೋತ್ರ ಮತ್ತೆ ಒಂದೇ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಬಾರಿ ಅವರು ಅಕ್ಕ ತಂಗಿಯಾಗಿ ಬರುತ್ತಿಲ್ಲ. ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಶಾ ಜೀವನ ಆಧರಿತ ಹೊಸ ಚಿತ್ರ ಸ್ಯಾಮ್ ಬಹದ್ದೂರ್‌ನಲ್ಲಿ ಎರಡು ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ. ಮೇಘನಾ ಗುಲ್ಝಾರ್ ನಿರ್ದೇಶನದ ಈ ಚಿತ್ರದಲ್ಲಿ ಸ್ಯಾಮ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸುತ್ತಿದ್ದು ಅವರ ಸ್ಯಾಮ್ ಲುಕ್ ಈಗಾಗಲೇ ಬಹಳ ಖ್ಯಾತಿ ಪಡೆದಿದೆ.

ಸ್ಯಾಮ್ ಪತ್ನಿ ಸಿಲ್ಲೂ ಮಾಣಿಕ್ ಶಾ ಪಾತ್ರಕ್ಕೆ ಸಾನ್ಯ ಆಯ್ಕೆಯಾಗಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯಾಗಿ ಫಾತಿಮಾ ನಟಿಸುತ್ತಿದ್ದಾರೆ. ಸೋಮವಾರ ಇವರಿಬ್ಬರನ್ನು ಚಿತ್ರ ತಂಡಕ್ಕೆ ವಿಕ್ಕಿ ಕೌಶಲ್ ಸ್ವಾಗತಿಸಿದ್ದಾರೆ. ಮಾಣಿಕ್ ಶಾ ಅವರ ಸಾಧನೆಗೆ ಸ್ಫೂರ್ತಿಯಾದ ಅವರ ಪತ್ನಿ ಸಿಲ್ಲೂ ಆಗಿ ನಟಿಸುವುದು ಬಹಳ ಖುಷಿಯಾಗಿದೆ ಎಂದು ಸಾನ್ಯ ಹೇಳಿದ್ದಾರೆ. ಧೈರ್ಯ, ಅಧಿಕಾರ ಹಾಗೂ ಘನತೆಯ ಪ್ರತೀಕವಾದ ಮಹಿಳೆ ಇಂದಿರಾ ಗಾಂಧಿಯಾಗಿ ಕಾಣಿಸಿಕೊಳ್ಳುವುದು ಹೆಮ್ಮೆಯ ವಿಷಯ ಎಂದಿದ್ದಾರೆ ಫಾತಿಮಾ ಸನಾ ಶೇಖ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)