ಮಿಯ್ಯಾರು ಸೈಂಟ್ ಡೊಮಿನಿಕ್ ಚರ್ಚ್ ನಲ್ಲಿ ವಾರ್ಷಿಕ ಹಬ್ಬ
ಕಾರ್ಕಳ : ಮಿಯ್ಯಾರು ಸೈಂಟ್ ಡೊಮಿನಿಕ್ ಚರ್ಚಿನ ವಾರ್ಷಿಕ ಹಬ್ಬ ಡಿ. 15ರಂದು ಸಂಭ್ರಮದಿಂದ ಜರಗಿತು. ಅತ್ತೂರು ಸಂತ ಲಾರೆನ್ಸ್ ಬಸಿಲಿಕ ಚರ್ಚ್ನ ಧರ್ಮ ಗುರು ವಂ. ಫಾದರ್ ಅಲ್ಬನ್ ಡಿʼಸೋಜಾ ದಿವ್ಯ ಬಲಿಪೂಜೆ ನೆರವೆರಿಸಿದರು. ಬಳಿಕ ಸಂದೇಶ ನೀಡಿದ ಅವರು ನಮ್ಮೆಲ್ಲರ ಮನಸ್ಸು ಪ್ರಭು ಯೇಸುವಿನ ಆಶಯದಂತೆ ಇತರರಿಗೆ ದಾರಿ ದೀಪವಾಗಬೇಕೆಂದರು.
ಕಾರ್ಕಳ ವಲಯ ಚರ್ಚ್ ಧರ್ಮ ಗುರು, ಉಡುಪಿ, ಮಂಗಳೂರು ಧರ್ಮ ಪ್ರಾಂತ್ಯದ ಅತಿಥಿ ಗುರುಗಳು, ಮಿಯ್ಯಾರು ಚರ್ಚ್ನ ಧರ್ಮ ಗುರು ವಂ. ಫಾದರ್ ಪಾವ್ಲ್ ರೇಗೊ, ಪಾಲನಾ ಮಂಡಳಿ ಉಪಾಧ್ಯಕ್ಷ ವಿನುಫ್ ಡಿಸೋಜಾ, ಕಾರ್ಯದರ್ಶಿ ಐಡಾ ಪಿರೇರಾ ಉಪಸ್ಥಿತರಿದ್ದರು.
Next Story