varthabharthi


ನಿಮ್ಮ ಅಂಕಣ

​ಗೇಟನ್ನು ತೆರವುಗೊಳಿಸಿ

ವಾರ್ತಾ ಭಾರತಿ : 20 Dec, 2021
-ಬೈಕಾಡಿ ಹುಸೈನ್, ತೋನ್ಸೆ

ಮಾನ್ಯರೇ,

ಮಲ್ಪೆ-ಕೊಡವೂರಿನಲ್ಲಿರುವ ಕಲ್ಮಾತ್ ಮಸೀದಿಗೆ ಮುಖ್ಯ ರಸ್ತೆಯ ಬದಿಯಲ್ಲಿರುವ ಕಾಲು ದಾರಿ ಮುಖಾಂತರ ಹಿಂದೆ ಜನರು ಪ್ರವೇಶಿಸುತ್ತಿದ್ದರು. ಈಗ ಏಕಾಏಕಿ ಕಾಲು ದಾರಿಗೆ ಗೇಟ್ ಅಳವಡಿಸಿ ಕಾನೂನು ಬಾಹಿರವಾಗಿ ಬೀಗ ಜಡಿಯಲಾಗಿದ್ದು, ಪ್ರಾರ್ಥನೆಗೆ ಹೋಗದಂತಾಗಿದೆ. ಇದರಿಂದಾಗಿ ನಿತ್ಯ ಪ್ರಾರ್ಥನೆ ಹಾಗೂ ಜುಮಾ ಪ್ರಾರ್ಥನೆ ಕಳೆದ 7 ತಿಂಗಳುಗಳಿಂದ ತಡೆಹಿಡಿಯಲಾಗಿದೆ. ಇದರಿಂದಾಗಿ ಸಂವಿಧಾನ ನೀಡಿದ ಧಾರ್ಮಿಕ ಪ್ರಾರ್ಥನೆಯ ಹಕ್ಕಿಗೆ ಚ್ಯುತಿ ಉಂಟಾಗಿದೆ.

ಸರಕಾರ ಈ ಕೂಡಲೇ ಮಧ್ಯ ಪ್ರವೇಶಿಸಿ ಮಸೀದಿಯ ಪ್ರಾರ್ಥನೆ ಹೋಗುವವರಿಗೆ ದಾರಿಗೆ ಹಾಕಿರುವ ಗೇಟನ್ನು ತೆರವುಗೊಳಿಸಿ ಪ್ರಾರ್ಥನೆಗೆ ಅವಕಾಶ ಮಾಡಿ ಕೊಟ್ಟು ಶಾಂತಿ ಸಹಬಾಳ್ವೆ, ಸೌಹಾರ್ದ, ಸಾಮರಸ್ಯಕ್ಕೆ ಭಂಗ ಬಾರದ ರೀತಿಯಲ್ಲಿ ಈ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕಾಗಿ ವಿನಂತಿ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)