ಭಾರತೀಯ ಪ್ರವಾಸಿಗರಿಗೆ ಯುಎಇ ಅತ್ಯಂತ ನೆಚ್ಚಿನ ತಾಣ
photo:Gulfnews
ಅಬುಧಾಬಿ, ಡಿ.21: ಭಾರತೀಯ ಪ್ರವಾಸಿಗರಿಗೆ ಯುಎಇ ವಿಶ್ವದ ಅತ್ಯಂತ ಜನಪ್ರಿಯ ಪ್ರವಾಸ ತಾಣವಾಗಿದೆ ಎಂದು ಭಾರತದ ವಿದೇಶ ವ್ಯವಹಾರ ಇಲಾಖೆಯ ಸಹಾಯಕ ಸಚಿವ ವಿ ಮುರಳೀಧರನ್ ಸಂಸತ್ತಿಗೆ ಅಂಕಿಅಂಶ ಸಹಿತ ನೀಡಿರುವ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 3,14,495 ಭಾರತೀಯರು ಪ್ರವಾಸಿಗರ ವೀಸಾದಲ್ಲಿ ಯುಎಇಗೆ ಭೇಟಿ ನೀಡಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಇದು ಸುಮಾರು 50%ದಷ್ಟು ಹೆಚ್ಚಳವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ 2020ರ ಮಾರ್ಚ್ನಿಂದ ಅಂತರಾಷ್ಟ್ರೀಯ ವಿಮಾನ ಪ್ರಯಾಣ ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಮುಂದಿನ 1 ವರ್ಷ ಬಹುತೇಕ ಅವಧಿಯಲ್ಲಿ ವಿಮಾನ ಸಂಚಾರ ರದ್ದಾಗಿರುವ ಕಾರಣ ಸಂಸದರು ತ್ರೈಮಾಸಿಕ ಅವಧಿಯ ಪ್ರಯಾಣಿಕರ ಕುರಿತ ಮಾಹಿತಿ ಮಾತ್ರ ಕೋರಿದ್ದರು ಎಂದು ವರದಿಯಾಗಿದೆ.
Next Story