varthabharthi


ನಿಮ್ಮ ಅಂಕಣ

ಅಪಘಾತಗಳನ್ನು ನಿಯಂತ್ರಿಸಬೇಕಾಗಿದೆ

ವಾರ್ತಾ ಭಾರತಿ : 21 Dec, 2021
ಶಾರ್ಲೆಟ್ ಜಾಸ್ಮಿನ್, ಕೊಡಿಯಾಲ್‌ಬೈಲ್, ಮಂಗಳೂರು

ಮಾನ್ಯರೇ,
ಪ್ರತಿದಿನ, ಪತ್ರಿಕೆಗಳು ಅಪಘಾತ ಪ್ರಕರಣಗಳ ವರದಿಯಿಂದ ತುಂಬಿರುತ್ತದೆ. ಇಂತಹ ಪ್ರಕರಣಗಳ ತನಿಖೆ ನಡೆಸಿದಾಗ ಸಾಮಾನ್ಯವಾಗಿ ಕಂಡುಬರುವ ಸಂಗತಿಯೆಂದರೆ, ಅಪಘಾತಕ್ಕೊಳಗಾದವರು ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸಿದ್ದರೆ ಅಪಘಾತವನ್ನು ತಪ್ಪಿಸಬಹುದಿತ್ತು ಎಂಬುದು.
ದ್ವಿಚಕ್ರ ವಾಹನ ಸವಾರಿ ಮಾಡುವಾಗ ಹೆಲ್ಮೆಟ್ ಧರಿಸುವುದು, ಕಾರಿನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಹಾಕುವುದು ಮುಂತಾದ ಸಂಚಾರ ನಿಯಮಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಪ್ರೋತ್ಸಾಹಿಸುವುದು ಇಂದಿನ ಅಗತ್ಯವಾಗಿದೆ. ಇನ್ನೊಂದು ಪ್ರಮುಖ ವಿಷಯವೆಂದರೆ, ಜನರು ವೇಗದ ಮಿತಿಯನ್ನು ದಾಟದಿರಲು ಎಚ್ಚರವಹಿಸಬೇಕು. ಟ್ರಾಫಿಕ್ ಪೊಲೀಸರು ಎಚ್ಚೆತ್ತು ಕಟ್ಟುನಿಟ್ಟಾಗಿ ಸ್ಪೀಡ್ ಸೆನ್ಸಿಂಗ್ ಸಾಧನಗಳು ಮತ್ತು ಕ್ಯಾಮರಾಗಳನ್ನು ಅಳವಡಿಸಿದರೆ ಸಾಕಷ್ಟು ಜೀವಗಳನ್ನು ಉಳಿಸಬಹುದು. ಇಂತಹ ಮುನ್ನೆಚ್ಚರಿಕೆಯನ್ನು ವಾಹನ ಸವಾರರು ಪಾಲಿಸಿದರೆ ಅಪಘಾತಗಳಿಂದ ಪಾರಾಗಬಹುದಲ್ಲವೇ?
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)