ಕೇಂದ್ರ ಸರಕಾರದಿಂದ ವೈರಸ್ ಮುನ್ನೆಚ್ಚರಿಕೆ
ಹೊಸದಿಲ್ಲಿ, ಡಿ. 23: ನೂತನ ಮಾದರಿಯ ರ್ಯಾನ್ಸೋಮ್ವೇರ್ ವೈರಸ್ ಈ ಮೇಲ್ ಮೂಲಕ ಹರಡುವುದು ಪತ್ತೆಯಾದ ಬಳಿಕ ಭಾರತ ಸರಕಾರ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಸ್ಪಂದನ ತಂಡ (ಸಿಇಆರ್ಟಿ)ದ ಮೂಲಕ ‘ವೈರಸ್ ಮನ್ನೆಚ್ಚರಿಕೆ’ ನೀಡಿದೆ.
ರ್ಯಾನ್ಸೋಮ್ವೇರ್ ವಿಂಡೋ ಕಂಪ್ಯೂಟರ್ಗಳನ್ನು ಗುರಿಯಾಗಿರಿಸಿದೆ. ರ್ಯಾನ್ಸೋಮ್ವೇರ್ ಪ್ರವೇಶಿಸಿದ ಬಳಿಕ ಕಂಪ್ಯೂಟರ್ ಲಾಕ್ ಆಗುತ್ತದೆ ಹಾಗೂ ಬಳಕೆದಾರರು ಹಣ ವರ್ಗಾಯಿಸುವಂತೆ ಸೂಚಿಸುತ್ತದೆ. ಒಂದು ವೇಳೆ ಬಳಕೆದಾರರು ಹಣ ವರ್ಗಾಯಿಸದೇ ಇದ್ದರೆ, ಕಂಪ್ಯೂಟರ್ನಲ್ಲಿ ಇರುವು ಫೈಲ್ಗಳು ನಾಶವಾಗುತ್ತವೆ ಅಥವಾ ಕಂಪ್ಯೂಟರ್ ಬಳಕೆಗೆ ನಿಷ್ಪ್ರಯೋಜಕವಾಗುತ್ತದೆ.
Next Story