ಝಲಕ್
ದಾಂಪತ್ಯ
ವಾರ್ತಾ ಭಾರತಿ : 26 Dec, 2021
ಮಗು

ಪತ್ನಿ ವಿಚ್ಛೇದನಕ್ಕೆ ಅರ್ಜಿ ಹಾಕಿದಳು. ಪತಿ ವಿರೋಧಿಸಿದ.
ಇಬ್ಬರು ಕೋರ್ಟು, ಕಚೇರಿ ಅಲೆದಾಡ ತೊಡಗಿದರು.
ಇಬ್ಬರ ವಕೀಲರೂ ಪ್ರಬಲರು. ಒಬ್ಬ ಮಹಿಳಾ ವಕೀಲೆ. ಇನ್ನೊಬ್ಬ ಪುರುಷ ವಕೀಲ. ವಾದ-ಪ್ರತಿವಾದ ಬಿರುಸಿನಿಂದ ನಡೆಯಿತು.
ಕೊನೆಗೂ ದಂಪತಿ ಬೇರೆ ಬೇರೆ ಆದರು.
ಕೋರ್ಟಿನಿಂದ ವಿಚ್ಛೇದಿತರು ಹೊರ ಬಂದಾಗ ಕ್ಯಾಂಟೀನ್‌ನಲ್ಲಿ ವಾದಿಸಿದ ಇಬ್ಬರು ವಕೀಲರು ನಗುತ್ತಾ ಟೀ ಕುಡಿಯುತ್ತಿದ್ದರು. ವಿಚ್ಛೇದಿತ ದಂಪತಿ ಧನ್ಯವಾದ ಹೇಳಲು ಅವರ ಬಳಿ ಹೋದರು.
ಪುರುಷ ವಕೀಲ ಹೇಳಿದ: ‘‘ಈಕೆ ನನ್ನ ಪತ್ನಿ. ನಮ್ಮ ಮದುವೆಗೆ 25 ವರ್ಷ ತುಂಬುತ್ತದೆ. ಸಮಾರಂಭ ಇದೆ. ಬರಬೇಕು. ನಮ್ಮ ಈ ಹಿಂದಿನ ಎಲ್ಲ ವಿಚ್ಛೇದಿತ ಕಕ್ಷಿದಾರರನ್ನು ಕರೆದಿದ್ದೇವೆ. ನಮ್ಮ ದಾಂಪತ್ಯದ ಯಶಸ್ವಿಗೆ ಅವರ ಪಾತ್ರ ದೊಡ್ಡದು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)