ಬೆಂಗಳೂರಿನಲ್ಲಿ ನಕಲಿ ನೋಟುಗಳ ಹಾವಳಿ: ಜೆರಾಕ್ಸ್ ನೋಟು ನೀಡಿ ವಂಚನೆ
ಸಾಂದರ್ಭಿಕ ಚಿತ್ರ
ಬೆಂಗಳೂರು, ಡಿ.26: ನಗರದಲ್ಲಿ ನಕಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ದುಷ್ಕರ್ಮಿಗಳು ಬಣ್ಣದ ಜೆರಾಕ್ಸ್ ನೋಟ್ ನೀಡಿ ಜನರನ್ನು ಮೋಸಗೊಳಿಸುತ್ತಿರುವುದು ಕಾಟನ್ಪೇಟೆಯಲ್ಲಿ ಬೆಳಕಿಗೆ ಬಂದಿದೆ.
ಈ ಬಗ್ಗೆ ಸ್ಥಳೀಯರು ಕಾಟನ್ ಪೇಟೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಹೊರಗಿನಿಂದ ನಗರಕ್ಕೆ ಬಂದ ದುಷ್ಕರ್ಮಿಗಳು ನೋಟನ್ನು ಜೆರಾಕ್ಸ್ ಮಾಡಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಹೊಟೇಲ್, ಬೀಡ ಅಂಗಡಿ, ಜನರಲ್ ಸ್ಟೋರ್ ಹೀಗೆ ಸಣ್ಣ ಪುಟ್ಟ ಅಂಗಡಿಗಳಲ್ಲಿ ಜೆರಾಕ್ಸ್ ನೋಟುಗಳನ್ನು ನೀಡಿದ್ದಾರೆ. ಹೊರಗಿನಿಂದ ಬಂದು ಲಾಡ್ಜ್ನಲ್ಲಿ ಉಳಿದುಕೊಂಡವರು ಈ ಕೃತ್ಯ ಎಸಗಿರಬಹುದು ಎಂಬ ಅನುಮಾನವಿದೆ. ಈ ಸಂಬಂಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story