varthabharthi


ನಿಮ್ಮ ಅಂಕಣ

ನುಡಿಮಾತಿನ ಶಬ್ದದಲ್ಲಿ ನ್ಯೂನತೆ

ವಾರ್ತಾ ಭಾರತಿ : 26 Dec, 2021
ಶ್ರೀನಿವಾಸ ಶೆಟ್ಟಿ ತೋನ್ಸೆ, ಬನ್ನಂಜೆ, ಉಡುಪಿ

ಗುಜರಾತ್ ರಾಜ್ಯದ ನರ್ಮದಾ ಜಿಲ್ಲೆಯ ಸರದಾರ್ ಸರೋವರ ಅಣೆಕಟ್ಟಿನ ಸಮೀಪದ ಕೆವಡಿಯ ವಸಾಹತು ಪ್ರದೇಶದಲ್ಲಿ ಪ್ರತಿಷ್ಠಾಪಿಸಿರುವ ಭಾರತದ ಪ್ರಥಮ ಗೃಹಮಂತ್ರಿ, ಉಕ್ಕಿನ ಮನುಷ್ಯ ಖ್ಯಾತಿಯ ಸರ್ದಾರ್ ವಲ್ಲಭಭಾಯ್ ಪಟೇಲರ ಮೂರ್ತಿಯನ್ನು ನೋಡಲು ಭಾರತದ ಪ್ರವಾಸಿಗರು ಮಾತ್ರವಲ್ಲ, ವಿದೇಶದಿಂದಲೂ ದಿನನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ. ಸರದಾರ್ ಸರೋವರ ಅಣೆಕಟ್ಟಿನ ಕಡೆಗೆ ಮುಖ ಮಾಡಿರುವ ಮೂರ್ತಿಯ ಎತ್ತರ 182 ಮೀಟರ್ (597ಅಡಿ) ಆಗಿದ್ದು ವಿಶ್ವದಲ್ಲಿಯೇ ಅತಿ ಹೆಚ್ಚಿನ ಎತ್ತರದ ಮೂರ್ತಿಯಾಗಿದೆ. ಕೆವಡಿಯ ಸಾರಿಗೆ ನಿಲ್ದಾಣದಿಂದ ಮೂರ್ತಿ ಇರುವಲ್ಲಿಗೆ ದಿನದಲ್ಲಿ ಆಗಾಗ ಉಚಿತ ಸಾರಿಗೆ ವ್ಯವಸ್ಥೆ ಮಾಡಲಾಗಿದೆ. ಮೂರ್ತಿಯನ್ನು ಅತಿಸಮೀಪದಿಂದ ನೋಡುವವರಿಗೆ ನೇರವಾಗಿ ಚಲಿಸುವ, ಎತ್ತರಕ್ಕೆ ಕೊಂಡೊಯ್ಯುವ, ಕೆಳಗಿಳಿಸುವ ಸ್ವಯಂಚಾಲಿತ ಸಾಧನವನ್ನು ಅಳವಡಿಸಲಾಗಿದೆ. ಸರದಾರ್ ಸರೋವರ ಅಣೆಕಟ್ಟು, ಹತ್ತಿರದಲ್ಲಿನ ಅಂದವಾದ ಹೂತೋಟ ವೀಕ್ಷಿಸಿ, ಮೂರ್ತಿ ಇರುವಲ್ಲಿಗೆ ಹೋಗಿ ಮೂರ್ತಿಯನ್ನು ನೋಡಿದ ನಂತರ ಸುಮಾರು ಅರ್ಧಗಂಟೆ ಕಾಲದ ಸಂಜೆ ಸಾಧಾರಣವಾಗಿ 7ಗಂಟೆಗೆ ಪ್ರಾರಂಭವಾಗುವ ಬೆಳಕು ಮತ್ತು ನುಡಿಶಬ್ದದ ಕಾರ್ಯಕ್ರಮ ವೀಕ್ಷಿಸಿ, ಆಲಿಸಬಹುದು. ನುಡಿಮಾತಿನ ಶಬ್ದದಲ್ಲಿ 1875ರ ಅಕ್ಟೋಬರ್ 13ರಂದು ಜನಿಸಿದ, ಡಿಸೆಂಬರ್ 15, 1950ರಲ್ಲಿ ನಿಧನರಾದ ಸರ್ದಾರ್ ವಲ್ಲಭಭಾಯಿ ಪಟೇಲರ ಜೀವನದ ಬಗ್ಗೆ ಸಂಕ್ಷಿಪ್ತವಾಗಿ ಹಿಂದಿಯಲ್ಲಿ ಮಾಹಿತಿಯಿದೆ. ಅನೇಕ ಬಾರಿ ದಾಳಿಗೊಳಗಾಗಿ, ಹಾನಿಯಾಗಿರುವ ಗುಜರಾತ್ ರಾಜ್ಯದ ಗಿರ್ ಸೋಮನಾಥ ಜಿಲ್ಲೆಯ ವೆರೆವಾಲಿನ ಸೋಮನಾಥ ದೇವಾಲಯದ ಪುನರ್ ರಚನೆಗಾಗಿ ಪಟೇಲರ ಅಭಿಪ್ರಾಯದಂತೆ ದೇವಸ್ಥಾನದ ಹೆಸರಿನಲ್ಲಿ ಪಾರುಪತೈಗಾರಿಕೆಯ ಸಮಿತಿ ರಚಿಸಲಾಯಿತು 1947ರ ನವೆಂಬರ್ 13ರಂದು. ಅದರ ಪ್ರಥಮ ಅಧ್ಯಕ್ಷರೇ ಸರ್ದಾರ್ ವಲ್ಲಭಭಾಯಿ ಪಟೇಲರು. ಅವರ ಸಲಹೆಯಂತೆ ಮಂದಿರ ಪುನಾರಚನಾ ಕಾಮಗಾರಿ ಆರಂಭವಾಗಿ 1950ರಲ್ಲಿ ಪೂರ್ತಿಗೊಂಡಿತ್ತು. ಅರಬಿ ಸಮುದ್ರದ ಕಿನಾರೆಯಲ್ಲಿನ ಈ ದೇವಸ್ಥಾನ ಭಾರತದಲ್ಲಿ ಮಾತ್ರವಲ್ಲ ವಿಶ್ವದಲ್ಲಿಯೇ ಪ್ರಸಿದ್ದಿಯನ್ನು ಪಡೆದು ದಿನಾ ಸಾವಿರಾರು ಭಕ್ತರು, ಪ್ರವಾಸಿಗರು ದೇವಸ್ಥಾನಕ್ಕೆ ಸಂದರ್ಶನ ನೀಡುವಂತೆ ಮಾಡಿದ ಕಾರ್ಯದಲ್ಲಿ ಪಟೇಲರ ಪಾತ್ರ ಬಹಳ ಪ್ರಾಮುಖ್ಯವಾದುದ್ದಾಗಿತ್ತು. ಆದರೆ ನುಡಿಶಬ್ದದ ಕಾರ್ಯಕ್ರಮದಲ್ಲಿ ಚುಟುಕಾಗಿ ಪ್ರಸ್ತಾಪಿಸದೆ ನ್ಯೂನತೆ ವೆಸಗಿರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಈ ವಿಚಾರವನ್ನು ನುಡಿಶಬ್ದದ ಕಾರ್ಯಕ್ರಮದಲ್ಲಿ ಅಳವಡಿಸಿ ಆಗಿರುವ ನ್ಯೂನತೆಯನ್ನು ಸರಿಪಡಿಸುವಂತೆ ಈ ಮೂಲಕ ಮನವಿಮಾಡಿಕೊಳ್ಳಲಾಗುತ್ತಿದೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)