ಕಡಬ: ವಾಹನದಡಿಗೆ ಬಿದ್ದು ಚಿರತೆಯನ್ನು ಹೋಲುವ ಕಾಡುಬೆಕ್ಕು ಸಾವು
ಕಡಬ, ಡಿ.27. ಚಿರತೆಯನ್ನು ಹೋಲುವ ಅಪರೂಪದ ಕಾಡುಬೆಕ್ಕೊಂದು ವಾಹನದ ಅಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ - ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಡಬ ಸಮೀಪದ ಹಳೆ ಸ್ಟೇಷನ್ ಎಂಬಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಚಿರತೆಮರಿಯಂತಿದ್ದ ಪ್ರಾಣಿಯೊಂದು ಇಂದು ಬೆಳಗ್ಗೆ ಯಾವುದೋ ವಾಹನದ ಅಡಿಗೆ ಬಿದ್ದು ಸಾವನ್ನಪ್ಪಿದ ಸ್ಥಿತಿಯಲ್ಲಿ ರಸ್ತೆಯಲ್ಲಿ ಬಿದ್ದಿರುವುದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಅದರಂತೆ ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಪರಿಶೀಲಿಸಿ ಇದು ಚಿರತೆಮರಿ ಅಲ್ಲ, ಕಾಡುಬೆಕ್ಕು ಎಂದು ಸ್ಪಷ್ಟಪಡಿಸಿದರು.
ಚಿರತೆಯನ್ನು ಹೋಲುವ ಈ ಬೆಕ್ಕುಗಳು ಪಶ್ಚಿಮ ಘಟ್ಟದಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಡುಬೆಕ್ಕಿನ ಕಳೇಬರವನ್ನು ಕಡಬ ಪಶು ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
Next Story