ಕೋಟೆಕಾರು ಪಟ್ಟಣ ಪಂಚಾಯತ್ ಚುನಾವಣೆ: ಮಂದಗತಿಯಲ್ಲಿ ಸಾಗಿದ ಮತದಾನ
ಉಳ್ಳಾಲ, ಡಿ.27: ಕೋಟೆಕಾರು ಪಟ್ಟಣ ಪಂಚಾಯತ್ ಗೆ ಇಂದು ಬೆಳಗ್ಗೆಯಿಂದ ಚುನಾವಣೆ ಆರಂಭಗೊಂಡಿದ್ದು, 17 ವಾರ್ಡುಗಳಿಗೆ 18 ಮತಗಟ್ಟೆಗಳಲ್ಲಿ ಮತದಾನ ಮಂದಗತಿಯಲ್ಲಿ ಸಾಗಿದೆ.
1-2 ವಾರ್ಡಿಗೆ ಕೋಟೆಕಾರು ಪ.ಪಂ ಕಚೇರಿ, 2-3 ಮಾಡೂರು ಸರಕಾರಿ ಶಾಲೆ, 4-5 ಅಸಿಸಿ ಶಾಲೆ ಬಗಂಬಿಲ, 5-6 ಸರಕಾರಿ ಹಿ.ಪ್ರಾ ಶಾಲೆ ಬಗಂಬಿಲ , 7-8 ಸರಕಾರಿ ಪ್ರೌಢ ಶಾಲೆ ಕೋಟೆಕಾರು, 9-10 ಸರಕಾರಿ ಕಿರಿಯ ಪ್ರಾ ಥಮಿಕ ಶಾಲೆ ಮಾಡೂರು, 11,11A ಸರಕಾರಿ ಪ್ರಾಥಮಿಕ ಶಾಲೆ ಪಾನೀರು, 12 ಕಣಚೂರು ಶಿಕ್ಷಣ ಸಂಸ್ಥೆ, 13 ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಪನೀರು, 14-15 ಮರ್ಕಝ್ ಅರೆಬಿಕ್ ಶಾಲೆ ಅಜ್ಜಿನಡ್ಕ, 16-17 ಅಜ್ಜಿನಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಗಳಲ್ಲಿ ಮತದಾನ ಆರಂಭವಾಗಿದೆ. ಮತದಾರರು ನಿಧಾನಗತಿಯಲ್ಲಿ ಮತಗಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಈ ನಡುವೆ ಮತದಾರ ಪಟ್ಟಿಯಲ್ಲಿ ಖಾಸಗಿ ಕಾಲೇಜುಗಳ ಕೇರಳದ ವಿದ್ಯಾರ್ಥಿಗಳ ಹೆಸರು ಇದೆ ಎಂಬ ವದಂತಿ ಹರಡಿದ್ದು, ಈ ಹಿನ್ನೆಲೆಯಲ್ಲಿ ಮತಗಟ್ಟೆ ಸಂಖ್ಯೆ 5, 6ರಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.