ಜ.3: ಮಳಲಿಪೇಟೆ ಮಸೀದಿಯಲ್ಲಿ ನೂರೇ ಅಜ್ಮೀರ್
ಮಂಗಳೂರು, ಡಿ.29: ಮಳಲಿಪೇಟೆ ಜುಮಾ ಮಸೀದಿ ಮತ್ತು ಮಅದನುಲ್ ಉಲೂಂ ಮದ್ರಸ ಇದರ 60ನೆ ವಾರ್ಷಿಕೋತ್ಸವ ಹಾಗೂ ಸನಸ್ತ ಅಂಗೀಕಾರದ ಸುವರ್ಣ ಮಹೋತ್ಸವದ ಪ್ರಯುಕ್ತ ಜ.3ರಂದು ಸಂಜೆ 6:30ಕ್ಕೆ ನೂರೇ ಅಜ್ಮೀರ್ (ಆಧ್ಯಾತ್ಮಿಕ ಸಂಗಮ) ಕಾರ್ಯಕ್ರಮ ನಡೆಯಲಿದೆ.
ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವ ನೀಡಲಿದ್ದಾರೆ ಎಂದು ಮಸೀದಿಯ ಅಧ್ಯಕ್ಷ ಮುಹಮ್ಮದ್ ಮಾಮು ಮಣೇಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story