ಕಾಸರಗೋಡು | ಜ್ಯೂಸ್ ನಲ್ಲಿ ನಿಷೇಧಿತ ಪಾನ್ ಮಸಾಲ ಉತ್ಪನ್ನ ಬೆರೆಕೆ: ಅಂಗಡಿ ಮಾಲಕನ ಬಂಧನ
ಕಾಸರಗೋಡು, ಅ.11: ಜ್ಯೂಸ್ ನಲ್ಲಿ ನಿಷೇಧಿತ ಪಾನ್ ಮಸಾಲ ಉತ್ಪನ್ನ ಬೆರೆಸಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಅಂಗಡಿ ಮಾಲಕನನ್ನು ಹೊಸದುರ್ಗ ಠಾಣಾ ಪೊಲೀಸರು (Arrest) ಬಂಧಿಸಿದ್ದಾರೆ.
ಹೊಸದುರ್ಗ ಮೀನಾಫೀಸ್ ಕಡಪ್ಪುರದ ಅಬ್ದುಲ್ ಸತ್ತಾರ್(48) ಬಂಧಿತ ಆರೋಪಿ. ಈತ ಜ್ಯೂಸ್ ನ ರುಚಿ ಹೆಚ್ಚಿಸಲು ಹಾಗೂ ಗ್ರಾಹಕರನ್ನು ಆಕರ್ಷಿಸಲು ಪಾನ್ ಮಸಾಲ ಹುಡಿಯನ್ನು ಜ್ಯೂಸ್ ಗೆ ಬೆರೆಸುತ್ತಿದ್ದನೆನ್ನಲಾಗಿದೆ. ಈ ಬಗ್ಗೆ ಪರಿಸರವಾಸಿಗಳು ನೀಡಿದ ಮಾಹಿತಿಯಂತೆ ಪೊಲೀಸರು ನಿಗಾ ಇರಿಸಿದ್ದರು. ಅದರಂತೆ ಸೋಮವಾರ ರಾತ್ರಿ ಡಿವೈಎಸ್ಪಿ ಪಿ.ಪಿ.ಬಾಲಕೃಷ್ಣ ನ್ ನೇತೃತ್ವದ ಪೊಲೀಸ್ ತಂಡ ತಪಾಸಣೆ ನಡೆಸಿದ್ದು, ಅಂಗಡಿಯಿಂದ ನಿಷೇಧಿತ ಪಾನ್ ಉತ್ಪನ್ನವನ್ನು ವಶಪಡಿಸಿಕೊಂಡಿದೆ.
ಅಂಗಡಿಯ ಲೈಸೆನ್ಸ್ ನ್ನು ರದ್ದುಪಡಿಸಲು ನಗರ ಸಭೆಗೆ ಮನವಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story