ಹಿಜಾಬ್ ಧರಿಸಲು ಅವಕಾಶ ಕಲ್ಪಿಸುವಂತೆ ಉಡುಪಿ ಜಿಲ್ಲಾಧಿಕಾರಿ, ಡಿಡಿಪಿಯುಗೆ ಮನವಿ
ಉಡುಪಿ, ಜ.1: ಉಡುಪಿ ಸರಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರಿಗೆ ಕೂಡಲೇ ತರಗತಿಗೆ ಹಿಜಾಬ್ ನೊಂದಿಗೆ ಪ್ರವೇಶ ನೀಡಲು ಅವಕಾಶ ಕಲ್ಪಿಸಿ ವಿವಾದ ಬಗೆಹರಿಸುವಂತೆ ಆಗ್ರಹಿಸಿ ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ ನಿಯೋಗ ಇಂದು ಉಡುಪಿ ಜಿಲ್ಲಾಧಿಕಾರಿ ಕುರ್ಮಾರಾವ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.
ಇದೇ ಸಂದರ್ಭದಲ್ಲಿ ನಿಯೋಗ ಪದವಿ ಪೂರ್ವ ಶಿಕ್ಷಣ ಇಲಾಖೆಯ ಅವರನ್ನು ಭೇಟಿ ಮಾಡಿ, ಸಮಸ್ಯೆಯನ್ನು ಶೀಘ್ರ ಬಗೆಹರಿಸಿ ವಿದ್ಯಾರ್ಥಿನಿಯರಿಗೆ ಶಿರ ವಸ್ತ್ರದೊಂದಿಗೆ ತರಗತಿ ಪ್ರವೇಶಿಸಲು ಅನುಮತಿ ನೀಡಬೇಕು. ಅದರೊಂದಿಗೆ ಅವರ ಸಂವಿಧಾನ ಬದ್ಧ ಹಕ್ಕನ್ನು ಸಂರಕ್ಷಿಸಬೇಕೆಂದು ವಿನಂತಿಸಲಾಯಿತು.
ನಿಯೋಗದಲ್ಲಿ ಜಮೀಲಾ ಸದೀದಾ, ಕುಲ್ಸುಮ್ ಅಬೂಬಕರ್, ಅಮ್ನಾ, ರಿನಾಝ್ ಉಪಸ್ಥಿತರಿದ್ದರು.
Next Story