ಕಾಪು, ಜ.2: ಚಿಲ್ಮೀ ಕೆ.ಬಾಲಕೃಷ್ಣ ಕಾಮತ್ ಕಟಪಾಡಿ(89) ಅಲ್ಪ ಕಾಲದ ಅಸೌಖ್ಯದಿಂದ ಜ.2ರಂದು ನಿಧನ ಹೊಂದಿದರು.
ಇವರು ಸಿಂಡಿಕೇಟ್ ಬ್ಯಾಂಕಿನ ಡೆಪ್ಯುಟಿ ಮ್ಯಾನೇಜರ್ ಆಗಿ ಕೊಲ್ಕತ್ತ, ಸೋಲಾಪುರ, ನಾಗ್ಪುರ್, ಉಡುಪಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.