ಫ್ರಾನ್ಸಿಸ್ ಶೈನಿ ಮೆನೇಜಸ್
ಶಿರ್ವ: ಯುವ ಲೆಕ್ಕ ಪರಿಶೋಧಕಿ, ಬಂಟಕಲ್ಲು ಮಾಪಾಡಿಯ ಫ್ರಾನ್ಸಿಸ್ ಶೈನಿ ಮೆನೇಜಸ್(30) ಅಸೌಖ್ಯದಿಂದ ಜ.1ರಂದು ವುಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಇವರು 2016ರಲ್ಲಿ ಉನ್ನತ ರ್ಯಾಂಕ್ನೊಂದಿಗೆ ಸಿಎ ಪದವಿ ಪೂರೈಸಿದ್ದರು. ಬೆಂಗಳೂರು ಹಾಗೂ ಲಂಡನ್ನಲ್ಲಿ ಲೆಕ್ಕ ಪರಿಶೋಧಕರಾಗಿ ಕಾರ್ಯನಿರ್ವಹಿಸಿದ್ದರು. ಪಾಂಬೂರು ಹೋಲಿ ಕ್ರಾಸ್ ಚರ್ಚಿನ ಐಸಿವೈಎಂ ಯುವ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಇವರು, ಶಿರ್ವ ವಲಯದ ಐಸಿವೈಎಂ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ತಂದೆ ಫ್ರೆಡಿಕ್ ಮೆನೇಜಸ್, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ.
Next Story