ಉಪ್ಪಿನಂಗಡಿ: ಕೊಯಿಲ ಗ್ರಾಮದ ಗಂಡಿಬಾಗಿಲು ನಿವಾಸಿ, ಬೀಡಿ ಗುತ್ತಿಗೆದಾರ ಪಿ. ಸುಲೈಮಾನ್ (55) ಕೆಲ ದಿನಗಳ ಅನಾರೋಗ್ಯದಿಂದ ಇಂದು ನಿಧನರಾದರು.
ಸುಲೈಮಾನ್ ರವರು ಭಾರತ್ ಮತ್ತು ಗಣೇಶ್ ಬೀಡಿ ಗುತ್ತಿಗೆದಾರರಾಗಿದ್ದರು. ಇವರು ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಚಿರಪರಿಚಿತರಾಗಿದ್ದರು.
ಅವರು ಪತ್ನಿ, ಪುತ್ರ, ಪುತ್ರಿಯರನ್ನು ಅಗಲಿದ್ದಾರೆ.