varthabharthi


ನಿಮ್ಮ ಅಂಕಣ

ದುಬಾರಿ ಶುಲ್ಕ ಸರಿಯೇ?

ವಾರ್ತಾ ಭಾರತಿ : 3 Jan, 2022
-ಕೆ.ಎಸ್. ನಾಗರಾಜ್, ಹನುಂತನಗರ, ಬೆಂಗಳೂರು

ಮಾನ್ಯರೇ,

ಬೆಂಗಳೂರು ನಗರದಲ್ಲಿ ಕನ್ನಡದ ಪರವಾದಂತಹ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಘ, ಸಂಸ್ಥೆಗಳು ಹಾಗೂ ಸಮಾಜಮುಖಿ ರಚನಾತ್ಮಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿರುವ ಸಂಘ, ಸಂಸ್ಥೆಗಳಿಗೆ ನೀಡಿರುವ ಜಾಗಕ್ಕೆ ಬಿಬಿಎಂಪಿಯವರು ಮಾರುಕಟ್ಟೆ ಮೌಲ್ಯದ ಶೇ. 10ರಷ್ಟು ದರವನ್ನು ಗುತ್ತಿಗೆ ನವೀಕರಣದ ಅವಧಿಯಲ್ಲಿ ಪಾವತಿಸಬೇಕೆಂದು ಹೇಳಿರುವುದು ಸರಿಯಲ್ಲ. ಇವರು ಯಾರೂ ಕ್ಲಬ್‌ಗಳನ್ನು ನಡೆಸುತ್ತಿಲ್ಲ ಅಥವಾ ಕಲ್ಯಾಣ ಮಂಟಪಗಳನ್ನು ನಡೆಸುತ್ತಿಲ್ಲ. ಸಮಾಜದಲ್ಲಿನ ಹೃದಯವಂತಿಕೆವುಳ್ಳ ಕೆಲವು ದಾನಿಗಳ ನೆರವಿನಿಂದ ಇವರು ತಮ್ಮ ಸಂಸ್ಥೆಗಳನ್ನು ಮುನ್ನಡೆಸಿಕೊಂಡು ಬಂದಿರುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರಕಾರ ಮತ್ತು ಬಿಬಿಎಂಪಿ ವತಿಯಿಂದ ಇಂತಹ ಸಂಸ್ಥೆಗಳಿಗೆ ಅನುದಾನವೂ ದೊರೆಯುತ್ತಿಲ್ಲ. ಇಂತಹ ಸಂಕಷ್ಟದ ಸಮಯದಲ್ಲಿ ಗುತ್ತಿಗೆ ನವೀಕರಣದ ಅವಧಿಯಲ್ಲಿ ದುಬಾರಿ ಶುಲ್ಕವನ್ನು ವಿಧಿಸುತ್ತಿರುವುದು ಸರಿಯಲ್ಲ. ಮಾನ್ಯ ಮುಖ್ಯಮಂತ್ರಿಗಳು ಇತ್ತ ಗಮನಹರಿಸಿ ಸಂಘ, ಸಂಸ್ಥೆಗಳ ಸೇವೆ ಮತ್ತು ಹಿರಿತನವನ್ನು ಗಮನದಲ್ಲಿಟ್ಟುಕೊಂಡು ಗುತ್ತಿಗೆ ಸಂದರ್ಭದಲ್ಲಿ ಹೊರೆಯಾಗದ ರೀತಿಯಲ್ಲಿ ನವೀಕರಣಕ್ಕೆ ಬೇಕಾದ ಮೊತ್ತವನ್ನು ನಿಗದಿಪಡಿಸಬೇಕೆಂದು ಕೋರುತ್ತೇನೆ. ರಾಜ್ಯ ಸರಕಾರ ಸರಿಯಾದ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಸೇವಾ ಮನೋಭಾವದ ಮತ್ತು ಕನ್ನಡಪರ ಭಾವನೆಯುಳ್ಳ ಸಂಘ, ಸಂಸ್ಥೆಗಳು ತಮ್ಮ ಚಟುವಟಿಕೆಗಳನ್ನು ನಿಲ್ಲಿಸಿ ಇವುಗಳನ್ನು ಮುಚ್ಚುವ ಸ್ಥಿತಿ ಬರಬಹುದು.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)