varthabharthi


ನಿಮ್ಮ ಅಂಕಣ

ಲಾಕ್‌ಡೌನ್ ಬೇಕೇ?

ವಾರ್ತಾ ಭಾರತಿ : 6 Jan, 2022
ನಿರ್ಮಲಾ ದೇವಾಡಿಗ, ಮುರ್ಡೇಶ್ವರ

ಮಾನ್ಯರೇ,

 ಕೋವಿಡ್-19 ಎಂಬ ಮಹಾಮಾರಿ ಸಾಂಕ್ರಾಮಿಕ ರೋಗದಿಂದ ಹೊರಬಂದು ನಾವೊಂದಿಷ್ಟು ಚೇತರಿಕೆ ಕಾಣುತ್ತಿದ್ದೇವೆ ಎನ್ನುವಷ್ಟರಲ್ಲಿಯೇ ‘‘ಹೋದೆಯಾ ಪಿಶಾಚಿ ಅಂದರೆ ಬಂದೆ ಗವಾಕ್ಷಿಲಿ’’ ಎನ್ನುವ ಹಾಗೆ ಮತ್ತೆ ದೇಶದಲ್ಲೆಡೆ ಕೊರೋನ ಮೂರನೇ ಅಲೆಯ ಅಬ್ಬರದ ಬಗ್ಗೆ ಮಾಧ್ಯಮಗಳು ಹೆದರಿಸತೊಡಗಿವೆ. ಈ ವೈರಸ್‌ನಿಂದ ರಕ್ಷಣೆ ಪಡೆಯುವ ನೆಪದಿಂದ ಭಾರತ 14-03-2020ರಂದು ರಾಷ್ಟ್ರೀಯ ಲಾಕ್‌ಡೌನ್ ಹೇರಿತ್ತು. ಈ ಲಾಕ್‌ಡೌನ್‌ನಿಂದಾಗಿ ಜನಸಾಮಾನ್ಯರು ಅದರಲ್ಲೂ ಬಡವರು, ವಲಸೆ ಕಾರ್ಮಿಕರು, ದಿನಗೂಲಿಯನ್ನು ನಂಬಿಕೊಂಡು ಜೀವನ ಮಾಡುತ್ತಿರುವ ಅದೆಷ್ಟು ಕೂಲಿಕಾರ್ಮಿಕರ, ವಿದ್ಯಾರ್ಥಿಗಳ ಸ್ಥಿತಿ ನಿಜಕ್ಕೂ ಶೋಚನೀಯವಾಗಿತ್ತು. ನಿರುದ್ಯೋಗ, ಬಡತನ, ಹಸಿವು, ಮಾನಸಿಕ ಹಿಂಸೆಯನ್ನು ಈ ಲಾಕ್‌ಡೌನ್ ಸೃಷ್ಟಿಸಿತು. ಈಗ ಮತ್ತೊಮ್ಮೆ ಮೂರನೇ ಬಾರಿ ಲಾಕ್‌ಡೌನ್ ಭಯವನ್ನು ಮಾಧ್ಯಮಗಳು ಹಬ್ಬಿಸುತ್ತಿವೆ. ಲಾಕ್‌ಡೌನ್ ಸರಕಾರದ ಅಂತಿಮ ನಿರ್ಧಾರವಾಗದಿರಲಿ. ಬದಲಿಗೆ ಸರಕಾರ ಸರಿಯಾದ ಪ್ರಮಾಣದಲ್ಲಿ ಕೋವಿಡ್ ಲಸಿಕೆಯ ಪೂರೈಕೆ ಮತ್ತು ಆಸ್ಪತ್ರೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳ ಪೂರೈಕೆ ಮತ್ತು ಕೋವಿಡ್ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದರ ಬಗ್ಗೆ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಲ್ಲಿ ಗಮನ ಹರಿಸಲಿ. ಇಲ್ಲವಾದಲ್ಲಿ ಕೊರೋನದಿಂದ ಮರಣ ಹೊಂದುವವರ ಸಂಖ್ಯೆಗಿಂತ ಬಡತನ, ಹಸಿವಿಂದ ಮರಣ ಹೊಂದುವವರ ಸಂಖ್ಯೆ ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)