varthabharthi


ನಿಮ್ಮ ಅಂಕಣ

ನಿಸ್ವಾರ್ಥ ಸೇವೆಗೆ ಸಂದ ಗೌರವ

ವಾರ್ತಾ ಭಾರತಿ : 8 Jan, 2022
-ಎ. ಅಬೂಬಕರ್ ಅನಿಲಕಟ್ಟೆ, ವಿಟ್ಲ

ಮಾನ್ಯರೇ,

ಜನಸೇವೆ ಮಾಡಲು ವಿದ್ಯೆ ಅಥವಾ ಹಣ ಮುಖ್ಯವಲ್ಲ ಎಂದು ದೇಶಕ್ಕೇ ಸಾರಿದ ಅಕ್ಷರಸಂತ ಹರೇಕಳ ಹಾಜಬ್ಬನವರ ಹೆಸರನ್ನು ಮಂಗಳೂರಿನ ರಸ್ತೆಯೊಂದಕ್ಕೆ ಇಡುವ ಮೂಲಕ ಮಹಾನಗರ ಪಾಲಿಕೆ ಸ್ವಾಗತಾರ್ಹ ಕೆಲಸ ಮಾಡಿದೆ.
ಅನಕ್ಷರಸ್ಥನಾದರೂ, ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದರೂ ತನ್ನೂರಿನಲ್ಲಿ ಶಾಲೆಯನ್ನು ತೆರೆಯುವ ಮೂಲಕ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಹಾಜಬ್ಬ ಇಂದು ಭಾರತೀಯರ ಮನೆಮಾತಾಗಿದ್ದಾರೆ.
ಕಿತ್ತಳೆ ಮಾರಿ ಶಾಲೆ ಮಾಡಿದವರು ಎಂದು ಸ್ವತಃ ಪ್ರಧಾನಿಯವರೇ ಹಾಜಬ್ಬರನ್ನು ಕೇಂದ್ರ ಸಚಿವರಿಗೆ ಪರಿಚಯ ಮಾಡುವಷ್ಟು ಪ್ರಸಿದ್ಧಿಯನ್ನು ಪಡೆದಿರುವ ಹಾಜಬ್ಬ ತನ್ನೊಂದಿಗೆ ಹರೇಕಳ ಎಂಬ ಕುಗ್ರಾಮದ ಕೀರ್ತಿ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದ್ದಾರೆ.
ತಾನು ಕಿತ್ತಳೆ ಮಾರುತ್ತಿದ್ದ ಅದೇ ರಸ್ತೆಗೆ ಜೀವಿತದ ಅವಧಿಯಲ್ಲಿ ತನ್ನ ಹೆಸರನ್ನು ಕಾಣುವಂತಾದುದು ಹಾಜಬ್ಬನವರ ನಿಸ್ವಾರ್ಥ ಸೇವೆಗೆ, ಸರಳತೆ, ಮುಗ್ಧತೆಗೆ ಸಂದ ಗೌರವವೆಂದರೆ ಅತಿಶಯೋಕ್ತಿಯಲ್ಲ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)