varthabharthi


ವಿಶೇಷ-ವರದಿಗಳು

ವಾಸ್ತವಾಂಶ ಪರಿಶೀಲನೆ

ಮಕ್ಕಳಲ್ಲಿ ತುರ್ತು ಬಳಕೆಗೆ ಕೊವ್ಯಾಕ್ಸಿನ್‌ಗೆ ಡಬ್ಲುಎಚ್‌ಒ ಅಂಗೀಕಾರ ನೀಡಿಲ್ಲ

ವಾರ್ತಾ ಭಾರತಿ : 10 Jan, 2022
ಇಶಾ ಬಾಜ್‌ಪೇಯಿ

ಭಾರತದ ನೂತನ ಸುತ್ತಿನ ಲಸಿಕಾ ಅಭಿಯಾನ ಜನವರಿ 3ರಂದು ಆರಂಭಗೊಂಡಿತು. ಈ ಬಾರಿ ಅದು 15ರಿಂದ 18 ವರ್ಷಗಳ ವಯೋ ಗುಂಪಿನವರನ್ನು ಗುರಿ ಮಾಡಿತ್ತು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡಿಸೆಂಬರ್ 27ರಂದು ಲಸಿಕಾ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿತು. ಕೊವ್ಯಾಕ್ಸಿನ್ ಈ ವಯೋ ಗುಂಪಿನ ತುರ್ತು ಬಳಕೆಗಾಗಿ ಭಾರತದಲ್ಲಿ ಅಂಗೀಕಾರಗೊಂಡ ಏಕೈಕ ಲಸಿಕೆ ಎಂದು ಮಾರ್ಗದರ್ಶಿ ಸೂತ್ರ ತಿಳಿಸಿತು.

ಈ ಸುತ್ತಿನ ಲಸಿಕಾ ಅಭಿಯಾನದಲ್ಲಿ, ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಮಾತ್ರ ಏಕೈಕ ಲಸಿಕಾ ಆಯ್ಕೆಯಾಗಿದೆ. ಯಾಕೆಂದರೆ, 15-18ರ ವಯೋಮಿತಿಯ ಗುಂಪಿನ ತುರ್ತು ಬಳಕೆಗಾಗಿ ವಿಶ್ವಆರೋಗ್ಯ ಸಂಸ್ಥೆ ಮಾಡಿರುವ ಪಟ್ಟಿಯಲ್ಲಿರುವ ಏಕೈಕ ಲಸಿಕೆ ಇದಾಗಿದೆ’’ ಎಂದು ಮಾರ್ಗದರ್ಶಿ ಸೂತ್ರಗಳು ತಿಳಿಸಿವೆ.
ಆದರೆ ಈ ಹೇಳಿಕೆಯಲ್ಲಿ ಎರಡು ತಪ್ಪುಗಳಿವೆ.
15-18 ವರ್ಷದ ಗುಂಪಿನಲ್ಲಿತುರ್ತು ಬಳಕೆಗಾಗಿ, ವಿಶ್ವಆರೋಗ್ಯ ಸಂಸ್ಥೆಯು ಕೋವ್ಯಾಕ್ಸಿನ್ ಲಸಿಕೆಯನ್ನು ಶಿಫಾರಸು ಮಾಡಿಲ್ಲ. ಭಾರತೀಯ ಮಹಾ ಔಷಧಿ ನಿಯಂತ್ರಕರು, ತುರ್ತು ಬಳಕೆಗಾಗಿ ಕೊವ್ಯಾಕ್ಸಿನ್‌ಗೆ ಅನುಮೋದನೆ ನೀಡಿರುವರಾದರೂ, ಅದು ಈ ಅನುಮೋದನೆ ಪಡೆದ ಏಕೈಕ ಲಸಿಕೆಯಲ್ಲ.
  ಲಸಿಕೆಯು ಕೋವಿಡ್-19 ವಿರುದ್ಧ ಶೇ.78 ಪರಿಣಾಮದರವನ್ನು ತೋರ್ಪಡಿಸಿದೆ ಎಂಬುದಾಗಿ ಕೊವ್ಯಾಕ್ಸಿನ್‌ನ ವೈದ್ಯಕೀಯ ಪ್ರಾಯೋಗಿಕ ಅಂಕಿ-ಅಂಶಗಳನ್ನು ಆಧರಿಸಿ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಸಲಹಾ ಸಮಿತಿಯ ಪರಿಣತರ ಸಮಿತಿಯು 2021ರಲ್ಲಿ ಶಿಫಾರಸು ಮಾಡಿತ್ತು.
ಒಂದು ತಿಂಗಳು ಬಳಿಕ, ಅಂದರೆ 2021 ನವೆಂಬರ್ 3ರಂದು, ತುರ್ತು ಬಳಕೆಗಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಶಿಫಾರಸುಗೊಂಡ 8ನೇ ಲಸಿಕೆ ಕೊವ್ಯಾಕ್ಸಿನ್ ಆಯಿತು. 18 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ನಾಲ್ಕು ವಾರಗಳ ಅವಧಿಯಲ್ಲಿ ಎರಡು ಡೋಸ್‌ಗಳ ಲಸಿಕೆಯ ಬಳಕೆಗೆ ಈ ಮಂಜೂರಾತಿ ನೀಡಲಾಗಿದೆ.
  ವಾಸ್ತವವಾಗಿ, 2021 ನವೆಂಬರ್ 29ರಂದು ನೀಡಿರುವ ಹೇಳಿಕೆಯಲ್ಲಿ 12-17 ವಯೋ ಗುಂಪಿನವರ ತುರ್ತು ಬಳಕೆಗಾಗಿ ಕೊವ್ಯಾಕ್ಸಿನ್‌ಗೆ ಅನುಮೋದನೆ ನೀಡಲಾಗಿಲ್ಲ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟೀಕರಣವನ್ನು ನೀಡಿತ್ತು.
12-17 ವಯೋ ಗುಂಪಿನವರಲ್ಲಿ ತುರ್ತು ಬಳಕೆಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್‌ಗೆ ಭಾತದಲ್ಲಿ ಅನುಮೋದನೆ
ನೀಡಲಾಗಿದೆ; ಆದರೆ, ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆಗೆ ಕೊವ್ಯಾಕ್ಸಿನ್‌ಗೆ ಇನ್ನೂ ಶಿಫಾರಸು ನೀಡಿಲ್ಲ’’ ಎಂಬುದಾಗಿ ಹೇಳಿಕೆ ತಿಳಿಸಿದೆ.
12ರಿಂದ 18 ವರ್ಷ ವಯಸ್ಸಿನ ವಯೋ ಗುಂಪಿನ ತುರ್ತು ಬಳಕೆಗಾಗಿ 2021 ಡಿಸೆಂಬರ್ 24ರಂದು ಕೊವ್ಯಾಕ್ಸಿನ್, ಭಾರತೀಯ ಔಷಧ ಮಹಾ ನಿರ್ದೇಶಕರಿಂದ ಅನುಮೋದನೆ ಪಡೆಯಿತು. ಆದರೆ, 12 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ತುರ್ತು ಬಳಕೆಗಾಗಿ ಝೈಡಸ್‌ಕ್ಯಾಡಿಲ ಕಂಪೆನಿಯ ಡಿಎನ್‌ಎ ಆಧಾರಿತ ಜೈಕೊವ್-ಡಿ ಲಸಿಕೆಗೂ ಭಾರತೀಯ ಔಷಧ ಮಹಾ ನಿರ್ದೇಶಕರು ನಾಲ್ಕು ತಿಂಗಳ ಮೊದಲೇ, ಅಂದರೆ 2021 ಆಗಸ್ಟ್ 20ರಂದು ಅನುಮೋದನೆ ನೀಡಿದ್ದರು.
ವಿಶ್ವ ಆರೋಗ್ಯ ಸಂಸ್ಥೆ ಕೂಡ ತನ್ನ ನವೆಂಬರ್ ಹೇಳಿಕೆಯಲ್ಲಿ, ಝೈಕೋವ್-ಡಿ ಲಸಿಕೆಗೆ ಭಾರತೀಯ ಮಹಾ ಔಷಧ ನಿಯಂತ್ರಕರು ಅನುಮೋದನೆ ನೀಡಿರುವ ಬಗ್ಗೆ, ಆದರೆ ವಿಶ್ವಆರೋಗ್ಯ ಸಂಸ್ಥೆ ಅನುಮೋದನೆ ನೀಡದಿರುವ ಬಗ್ಗೆ ತಿಳಿಸಿತ್ತು.

 ಕೃಪೆ: Factchecker.in

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)