ನಿಮ್ಮ ಅಂಕಣ
ಕಲಬೆರಕೆ ಆಹಾರಗಳಿಗೆ ಕಡಿವಾಣ ಬೀಳಲಿ
ಮಾನ್ಯರೇ,
ರೈತ, ಹಾಲಿನ ಕೇಂದ್ರಗಳಿಗೆ (ಡೈರಿ) ತಂದು ಹಾಕುವ ಹಾಲನ್ನೇ ಹಲವು ಬಾರಿ ಪರೀಕ್ಷಿಸಿ ಅದರಲ್ಲಿ ಸಣ್ಣದೊಂದು ಲೋಪ ಕಂಡರೂ ಅದನ್ನು ಯಾವುದೇ ಮುಲಾಜಿಲ್ಲದೆ ತಿರಸ್ಕರಿಸುವ ಹಾಲು ಒಕ್ಕೂಟ ಮಹಾ ಮಂಡಳಿಯವರು ಅದೇ ಮೈಸೂರಿನ ತೋಟದ ಮನೆಯೊಂದರಲ್ಲಿ ಕೆಲವು ಮಂದಿ ಹೊರ ರಾಜ್ಯದಿಂದ ಬಂದು ಇಲ್ಲಿ ಅಕ್ರಮವಾಗಿ ನಕಲಿ ನಂದಿನಿ ತುಪ್ಪದ ತಯಾರಿಕೆಯ ದೊಡ್ಡದೊಂದು ದಂಧೆಯನ್ನು ಯಾವುದೇ ಎಗ್ಗಿಲ್ಲದೆ ನಡೆಸುತ್ತಾ ಬಂದಿದ್ದರೂ ಅತ್ತ ಸಣ್ಣದೊಂದು ಗಮನವನ್ನು ಕೊಡದೆ ಕಣ್ಮುಚ್ಚಿ ಕುಳಿತದ್ದಂತೂ ನಿಜಕ್ಕೂ ಸೋಜಿಗವೇ ಸರಿ.
ಇಂದು ಮಾನವ ಸೇವನೆಯ ಪ್ರತಿಯೊಂದು ಆಹಾರ ಪದಾರ್ಥವೂ ಕಲಬೆರಕೆ ಆಗುತ್ತಿದ್ದು, ಕೆಲವು ಕಾಣದ ಕೈಗಳು ಹಣ ಮಾಡುವ ದುರಾಸೆಯಿಂದ ಇಂತಹ ಅಕ್ರಮ ಕಲಬೆರಕೆ ಹಾಗೂ ನಕಲಿ ಪದಾರ್ಥಗಳ ತಯಾರಿಸುವ ದೊಡ್ಡ ದಂಧೆಯಲ್ಲಿ ಕೈ ಜೋಡಿಸಿ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿವೆ. ಹಾಗಾಗಿ ಸರಕಾರ ಇತ್ತ ಕೂಡಲೇ ಗಮನಹರಿಸಿ ಇಂತಹ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿ ಅಕ್ರಮ ದಂಧೆಯಲ್ಲಿ ತೊಡಗಿರುವವರಿಗೆ ಸರಿಯಾದ ಪಾಠ ಕಲಿಸಿ ಜನತೆಯ ಹಿತಕಾಯಬೇಕಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ