ಉಡುಪಿಯಲ್ಲಿ ‘ಟ್ರಾವ್‌ಯುನೈಟೆಡ್’ ಟ್ರಾವೆಲ್ ಕಂಪೆನಿ ಶುಭಾರಂಭ
ಉಡುಪಿ, ಜ.14: ಉಡುಪಿ ಕರಾವಳಿ ಬೈಪಾಸ್ ಸಮೀಪದ ರೀಗಲ್ ನೆಕ್ಸ್ಟ್ ಕಟ್ಟಡದ ಮೊದಲನೆ ಮಹಡಿಯಲ್ಲಿ ‘ಟ್ರಾವ್‌ಯುನೈಟೆಡ್’ ಟ್ರಾವೆಲ್ ಕಂಪೆನಿಯು ಇಂದು ಶುಭಾರಂಭಗೊಂಡಿತು.
ಸಂಸ್ಥೆಯನ್ನು ಉದ್ಘಾಟಿಸಿದ ಸೌದಿ ಅರೇಬಿಯಾದ ಅಲ್‌ಮುಝೈನ್ ಗಲ್ಫ್ ಕಸ್ಟ್ರಕ್ಟ್‌ನಿಂಗ್ ಕಂಪೆನಿಯ ಸಿಇಓ ಝಕರಿಯಾ ಬಜಪೆ ಮಾತನಾಡಿ, ಪ್ರಾಮಾಣಿಕತೆ ಹಾಗೂ ಪರಿಶ್ರಮದಿಂದ ಉದ್ಯಮದಲ್ಲಿ ಯಶಸ್ಸು ಸಾಧ್ಯ. ನೌಕರರೇ ಸಂಸ್ಥೆಯ ನಿಜವಾದ ಆಸ್ತಿ. ತಂದೆ ತಾಯಿ ಸೇರಿದಂತೆ ಪ್ರತಿಯೊಬ್ಬರನ್ನು ಪ್ರೀತಿಸಿ ಗೌರವಿಸಬೇಕು. ಈ ಸಂಸ್ಥೆ ಹಲವು ಮಂದಿ ಉದ್ಯೋಗ ನೀಡುವ ಮೂಲಕ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ಶುಭಹಾರೈಸಿದರು.
ಈ ಸಂದರ್ಭದಲ್ಲಿ ಝಕರಿಯಾ ಬಜಪೆ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಆಡಳಿತ ನಿರ್ದೇಶಕ ರಿದ್ವಾನ್ ಫಾರೂಕ್, ಮುಹಮ್ಮದ್ ಫಾರೂಕ್, ಅಬ್ದುಲ್ ರಝಾಕ್, ವ್ಯವಸ್ಥಾಪಕ ಎಲ್ವಿಸ್ ಲೂವಿಸ್ ಮೊದಲಾದವರು ಉಪಸ್ಥಿತರಿದ್ದರು.
ಇಲ್ಲಿ ಏರ್‌ಲೈನ್ಸ್ ಟಿಕೆಟ್, ಟೂರಿಸ್ಟ್ ವೀಸಾ, ಹಾಲಿಡೇಸ್ ಪ್ಯಾಕೇಜ್, ಇನ್ಸೂರೆನ್ಸ್, ಸ್ಟಡಿ ಅಬ್ರೋಡ್, ಹಜ್ ಮತ್ತು ಉಮ್ರಾ ವ್ಯವಸ್ಥೆಗಳಿವೆ. ಈ ಸಂಸ್ಥೆಯು ಭಾರತ ಮತ್ತು ಯುಎಇಗಳಲ್ಲಿ ತನ್ನ ಶಾಖೆಗಳನ್ನು ಹೊಂದಿವೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 6360392398, 9986457097ನ್ನು ಸಂಪರ್ಕಿಸಬಹುದು ಎಂದು ರಿದ್ವಾನ್ ಫಾರೂಕ್ ತಿಳಿಸಿದ್ದಾರೆ.