varthabharthi


ಕರ್ನಾಟಕ

ಬೆಲೆ ಏರಿಕೆಯಿಂದ ಗ್ಯಾಸ್ ಒಲೆ ಉರಿಯುತ್ತಿಲ್ಲ: ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಟೀಕೆ

ವಾರ್ತಾ ಭಾರತಿ : 14 Jan, 2022

ಬೆಂಗಳೂರು: 13 ರಾಜ್ಯಗಳಲ್ಲಿ ಶೇ.50ರಷ್ಟು ಜನತೆಗೆ ಗ್ಯಾಸ್ ಸಂಪರ್ಕವಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ. 

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಶೇ.99 ಎಲ್‌ಪಿಜಿ ಸಂಪರ್ಕ ನೀಡಲಾಗಿದೆ ಎಂಬ ಕೇಂದ್ರ ಸರ್ಕಾರದ ಮಹಾ ಸುಳ್ಳು ನೀತಿ ಆಯೋಗದ ಸರ್ವೇಯಲ್ಲಿ ಬಯಲಾಗಿದೆ ಎಂದು ತಿಳಿಸಿದೆ. 

13 ರಾಜ್ಯಗಳಲ್ಲಿ ಶೇ.50 ಜನತೆಗೆ ಗ್ಯಾಸ್ ಸಂಪರ್ಕವಿಲ್ಲ. ಕರ್ನಾಟಕದ 17 ಜಿಲ್ಲೆಗಳಲ್ಲಿ ಶೇ.50 ಜನತೆಗೆ ಎಲ್ ಪಿಜಿ ಸಂಪರ್ಕವಿಲ್ಲ, ಎಲ್ ಪಿಜಿ ಸಂಪರ್ಕ ಹೊಂದಿದವರಿಗೆ ಸಬ್ಸಿಡಿ ಇಲ್ಲ, ಬೆಲೆ ಏರಿಕೆಯಿಂದ ಗ್ಯಾಸ್ ಒಲೆ ಉರಿಯುತ್ತಿಲ್ಲ! ಎಂದು ವ್ಯಂಗ್ಯವಾಡಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)