varthabharthi


ಕ್ರೀಡೆ

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಎಂದಿಗೂ ಉಳಿದ ಆಟಗಾರರಿಗೆ ಮಾದರಿಯಾಗುವುದಿಲ್ಲ: ಗೌತಮ್‌ ಗಂಭೀರ್‌

ವಾರ್ತಾ ಭಾರತಿ : 14 Jan, 2022

ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ವಿವಾದಾತ್ಮಕ ಡಿಆರ್‌ಎಸ್ ನಿರ್ಧಾರದ ವಿರುದ್ಧ ವಿರಾಟ್ ಕೊಹ್ಲಿ ಅವರ ಆಕ್ರೋಶವು "ಅಪಕ್ವವಾಗಿದೆ" ಹಾಗೂ ಅಂತಹ "ಅತಿರೇಕದ" ಪ್ರತಿಕ್ರಿಯೆಯೊಂದಿಗೆ, "ಭಾರತ ತಂಡದ ನಾಯಕ ಎಂದಿಗೂ ಯುವ ಆಟಗಾರರಿಗೆ ಮಾದರಿಯಾಗುವುದಿಲ್ಲ" ಎಂದು ಮಾಜಿ ಆರಂಭಿಕ ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

ಪಂದ್ಯಾಟದ ಕೊನೆ ಹಂತದಲ್ಲಿ ಡಿಆರ್‌ಎಸ್‌ ನಿರ್ಧಾರದಿಂದ ಕುಪಿತಗೊಂಡ ಕೆಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ ಹಾಗೂ ರವಿಚಂದ್ರನ್‌ ಅಶ್ವಿನ್‌ ವಿಕೆಟ್‌ ಮೈಕ್‌ ಬಳಿ ಹೋಗಿ ಅಂಪೈರಿಂಗ್‌ ಕುರಿತು ಅಸಂಬದ್ಧ ಟೀಕೆಯನ್ನು ಮಾಡಿದ್ದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. 

"ಇದು ನಿಜವಾಗಿಯೂ ಕೆಟ್ಟದು. ಸ್ಟಂಪ್ ಮೈಕ್ ಬಳಿ ಹೋಗಿ ಆ ರೀತಿ ಪ್ರತಿಕ್ರಿಯಿಸಿದ ಕೊಹ್ಲಿ ಮಾಡಿದ್ದು ನಿಜಕ್ಕೂ ಅಪ್ರಬುದ್ಧ. ಅಂತರಾಷ್ಟ್ರೀಯ ನಾಯಕನಿಂದ, ಭಾರತೀಯ ನಾಯಕನಿಂದ ನಿರೀಕ್ಷಿಸುವುದು ಇದನ್ನಲ್ಲ” ಎಂದು ಗಂಭೀರ್ ಸ್ಟಾರ್ ಸ್ಪೋರ್ಟ್ಸ್‌ಗೆ ಹೇಳಿದ್ದಾರೆ.

"ಇದು ವಿರಾಟ್‌ ಕೊಹ್ಲಿಯ ವರ್ತನೆಯಾಗಿದೆ. ಅವರಿಗೆ ಹೇಗೆ ಬೇಕೋ ಹಾಗೆ ವರ್ತಿಸುತ್ತಾರೆ. ಉಳಿದ ಕ್ರಿಕೆಟ್‌ ಜಗತ್ತು ಅವರ ವರ್ತನೆಗೆ ತಲೆಬಾಗುತ್ತಿದೆ. ಇಲ್ಲಿ ಶಕ್ತಿಕೇಂದ್ರ ಭಾರತ ಮಾತ್ರ. ಇದನ್ನು ಹೇಳಲು ನನಗೆ ಇಷ್ಟವಿಲ್ಲ ಆದರೂ ಇದು ಹಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ" ಎಂದು ಗಂಭೀರ್‌ ಹೇಳಿಕೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)