varthabharthi


ರಾಷ್ಟ್ರೀಯ

ನಾಳೆ ಭಾರತ-ಪಾಕ್ ಗಡಿಯಲ್ಲಿ ವಿಶ್ವದ ಬೃಹತ್ ಖಾದಿ ರಾಷ್ಟ್ರಧ್ವಜದ ಪ್ರದರ್ಶನ

ವಾರ್ತಾ ಭಾರತಿ : 14 Jan, 2022

ಹೊಸದಿಲ್ಲಿ,ಜ.14: ಸೇನಾ ದಿನವಾದ ಶನಿವಾರ ಜೈಸಲ್ಮೇರ್ ಭಾರತ-ಪಾಕ್ ಗಡಿಯಲ್ಲಿ ಖಾದಿ ಬಟ್ಟೆಯಿಂದ ತಯಾರಾಗಿರುವ ವಿಶ್ವದ ಅತ್ಯಂತ ಬೃಹತ್ ರಾಷ್ಟ್ರಧ್ವಜವಾಗಿರುವ ಸ್ಮಾರಕಾರ್ಥ ರಾಷ್ಟ್ರಧ್ವಜವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗುವುದು. 1971ರ ಭಾರತ-ಪಾಕಿಸ್ತಾನ ನಡುವಿನ ಐತಿಹಾಸಿಕ ಯುದ್ಧದ ಕೇಂದ್ರ ಸ್ಥಳವಾಗಿದ್ದ ಲೋಂಗೆವಾಲಾದಲ್ಲಿ ಸ್ಮಾರಕಾರ್ಥ ರಾಷ್ಟ್ರಧ್ವಜವು ಪ್ರದರ್ಶನಗೊಳ್ಳಲಿದೆ. 2021,ಅ.2ರಂದು ಲೇಹ್ನಲ್ಲಿ ಅನಾವರಣಗೊಂಡ ಬಳಿಕ ಇದು ಸ್ಮಾರಕಾರ್ಥ ರಾಷ್ಟ್ರಧ್ವಜದ ಐದನೇ ಸಾರ್ವಜನಿಕ ಪ್ರದರ್ಶನವಾಗಲಿದೆ.

ಭಾರತೀಯತೆಯ ಸಾಮೂಹಿಕ ಸ್ಫೂರ್ತಿ ಮತ್ತು ಖಾದಿಯ ಸಾಂಪ್ರದಾಯಿಕ ಕರಕುಶಲತೆಯ ಸಂಕೇತವಾಗಿರುವ ಸ್ಮಾರಕಾರ್ಥ ರಾಷ್ಟ್ರಧ್ವಜವನ್ನು ‘ಆಝಾದಿ ಕಾ ಅಮೃತ ಮಹೋತ್ಸವ ’ ಸಂಭ್ರಮಕ್ಕಾಗಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗವು ತಯಾರಿಸಿದೆ. ಆಯೋಗವು ಐತಿಹಾಸಿಕ ಸಂದರ್ಭಗಳಲ್ಲಿ ಪ್ರತಿಷ್ಠಿತ ತಾಣಗಳಲ್ಲಿ ಪ್ರದರ್ಶಿಸಲು ಈ ರಾಷ್ಟ್ರಧ್ವಜವನ್ನು ರಕ್ಷಣಾ ಪಡೆಗಳಿಗೆ ಹಸ್ತಾಂತರಿಸಿದೆ.


225 ಅಡಿ ಉದ್ದ,150 ಅಡಿ ಅಗಲವನ್ನು ಹೊಂದಿರುವ ಸ್ಮಾರಕಾರ್ಥ ರಾಷ್ಟ್ರಧ್ವಜವು ಸುಮಾರು 1,400 ಕೆ.ಜಿ.ತೂಕವಿದೆ. ಧ್ವಜವನ್ನು ತಯಾರಿಸಲು 70 ಖಾದಿ ಕುಶಲಕರ್ಮಿಗಳು 49 ದಿನಗಳ ಕಾಲ ಶ್ರಮಿಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)