varthabharthi


ಕರ್ನಾಟಕ

'ಮಕರ ಸಂಕ್ರಾಂತಿಗೆ ಯುಗಾದಿಯ ಬೇವು ಬೆಲ್ಲದ ಟ್ವೀಟ್': ನಳಿನ್ ಕುಮಾರ್ ಕುರಿತು ರಕ್ಷಾ ರಾಮಯ್ಯ ವ್ಯಂಗ್ಯ

ವಾರ್ತಾ ಭಾರತಿ : 14 Jan, 2022

ಬೆಂಗಳೂರು: ಮಕರ ಸಂಕ್ರಾತಿಯ ಶುಭಾಶಯ ಕೋರಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರದ್ದೆನ್ನಲಾದ ಟ್ವೀಟ್ ಕುರಿತು  ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಗೇಲಿ ಮಾಡಿದ್ದಾರೆ. 

ಬೇವಿನ ಕಹಿ ಹಾಗೂ ಬೆಲ್ಲದ ಸಿಹಿಯನ್ನು ಸಮನಾಗಿ ಸ್ವೀಕರಿಸುವಂತೆ ಬದುಕಿನ ಪಥದಲ್ಲಿ ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸುವ ಶಕ್ತಿಯನ್ನು ಈ ಸಂಕ್ರಾಂತಿಯು ನಿಮ್ಮಲ್ಲಿ ತರಲಿ ಎಂದು ನಳಿನ್ ಕುಮಾರ್ ಕಟೀಲ್ ಮಾಡಿದ್ದಾರೆನ್ನಲಾದ ಟ್ವೀಟ್ ನ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿರುವ  ರಕ್ಷಾ ರಾಮಯ್ಯ ''ಹಿಂದುತ್ವದ ನಾಯಕನಿಗೆ ಸಂಕ್ರಾಂತಿಗೂ ಯುಗಾದಿಗೂ ವ್ಯತ್ಯಾಸ ಗೊತ್ತಿಲ್ಲ'' ಎಂದು ವ್ಯಂಗ್ಯವಾಡಿದ್ದಾರೆ. 

ಆದರೆ ನಳಿನ್ ಕುಮಾರ್ ಕಟೀಲ್ ಅವರ ಟ್ವಿಟರ್ ಖಾತೆಯಲ್ಲಿ ಈ ಟ್ವೀಟ್ ಇದೀಗ ಕಂಡು ಬರುತ್ತಿಲ್ಲ. ಅವರು ಟ್ವೀಟ್ ಡಿಲೀಟ್ ಮಾಡಿದ್ದಾರೆಯೋ ಅಥವಾ ಇದು ನಕಲಿಯೋ ಅನ್ನುವುದರ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಈ ನಡುವೆ ನಳಿನ್ ಕುಮಾರ್ ಕಟೀಲ್ ಟ್ವೀಟ್ ಕುರಿತು ಸಾಮಾಜಿಕ ತಾಣದಲ್ಲಿ ಚರ್ಚೆಗಳೂ ಪ್ರಾರಂಭವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)