varthabharthi


ಕ್ರೀಡೆ

ಟೆಸ್ಟ್‌ ನಾಯಕತ್ವಕ್ಕೆ ವಿರಾಟ್‌ ಕೊಹ್ಲಿ ರಾಜೀನಾಮೆ: ಬಿಸಿಸಿಐ ವಿರುದ್ಧ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಆಕ್ರೋಶ

ವಾರ್ತಾ ಭಾರತಿ : 15 Jan, 2022

ಹೊಸದಿಲ್ಲಿ: ಅಂತರಾಷ್ಟ್ರೀಯ ಏಕದಿನ ನಾಯಕತ್ವದಿಂದ ಕೆಳಗಿಳಿಸಿದ ಕೆಲವೇ ವಾರಗಳ ಅಂತರದಲ್ಲಿ ಟೆಸ್ಟ್‌ ನಾಯಕತ್ವಕ್ಕೂ ಕೊಹ್ಲಿ ರಾಜಿನಾಮೆ ನೀಡಿದ್ದಾರೆ. ಕೊಹ್ಲಿಯ ಹಠಾತ್‌ ರಾಜಿನಾಮೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಈ ನಡುವೆ ಕೊಹ್ಲಿ ರಾಜಿನಾಮೆಗೆ ಬಿಸಿಸಿಐ ನೇರ ಕಾರಣ ಎಂದು ಕೆಲವರು ಆರೋಪಿಸಿದ್ದು, ಬಿಸಿಸಿಐ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೆಚ್ಚುತ್ತಿದೆ. ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಜಯ್‌ ಶಾ ವಿರುದ್ಧವೂ ಟೀಕೆಗಳು ಕೇಳಿಬರುತ್ತಿವೆ.

ಟ್ವಿಟರ್‌ ಬಳಕೆದಾರರೊಬ್ಬರು ಕೊಹ್ಲಿ ರಾಜಿನಾಮೆಗೆ ಬಿಸಿಸಿಐ ಯನ್ನು ದೂಷಿಸಿದ್ದು, ಸೌರವ್‌ ಗಂಗೂಲಿ ಒಬ್ಬ ಆಟಗಾರರಾಗಿ ಉತ್ತಮರು ಆದರೆ ಬಿಸಿಸಿಐ ಅಧ್ಯಕ್ಷರಾಗಿ ಯೋಗ್ಯರಲ್ಲ ಎಂದು ಟ್ವೀಟ್‌ ಮಾಡಿದ್ದಾರೆ. 

ರಾಜಿನಾಮೆ ನೀಡುವ ಕುರಿತು ಕೊಹ್ಲಿ ಮಾಡಿರುವ ಟ್ವೀಟನ್ನು ಉಲ್ಲೇಖಿಸಿ ಬಿಸಿಸಿಐ ಟ್ವೀಟ್‌ ಮಾಡಿದ್ದು, “ಅಭಿನಂದನಾರ್ಹ ನಾಯಕತ್ವದ ಗುಣಗಳಿಂದಾಗಿ ವಿರಾಟ್‌ ಕೊಹ್ಲಿ ಟೆಸ್ಟ್ ತಂಡವನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ದಿದ್ದಾರೆ. ಬಿಸಿಸಿಐ ಅವರನ್ನು ಅಭಿನಂದಿಸುತ್ತದೆ. ಅವರು 68 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು 40 ಗೆಲುವುಗಳೊಂದಿಗೆ ಅತ್ಯಂತ ಯಶಸ್ವಿ ನಾಯಕರಾಗಿದ್ದಾರೆ” ಎಂದು ಬಿಸಿಸಿಐ ಟ್ವೀಟ್‌ ಮಾಡಿತ್ತು.

ಬಿಸಿಸಿಐ ಈ ಟ್ವೀಟ್‌ಗೆ ಆಕ್ರೋಶದ ಪ್ರತಿಕ್ರಿಯೆಗಳು ಬಂದಿದ್ದು, ನಿಮ್ಮಿಂದಾಗಿಯೇ (ಬಿಸಿಸಿಐ) ಅವರು ರಾಜಿನಾಮೆ ನೀಡಿದ್ದಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದು ನೆಟ್ಟಿಗರು ಬಿಸಿಸಿಐಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಜೊತೆಗೆ ಅಮಿತ್‌ ಶಾ ಪುತ್ರ ಜಯ್‌ ಶಾ ಕೈವಾಡವೂ ಇದರ ಹಿಂದಿದೆ ಎಂದು ಆರೋಪಿಸಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಸೋಲಿನ ಬಳಿಕ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರ ಪ್ರಕಟಿಸಿದ್ದರು. 2014 ರಲ್ಲಿ ಟೀಮ್ ಇಂಡಿಯಾ ಟೆಸ್ಟ್ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದ ವಿರಾಟ್ ಕೊಹ್ಲಿ, ತಮ್ಮ ನಾಯಕತ್ವದಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಭಾರತ ತಂಡವು ಹಲವು ಸರಣಿಗಳನ್ನು ಜಯಿಸಿ ದಾಖಲೆ ಬರೆದಿತ್ತು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)