ಬೆಂಗಳೂರು
ಬೆಂಗಳೂರು: ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆ; ತಾಯಿ-ಮಗಳು ಮೃತ್ಯು

ಗೌತಮಿ ಮಂಗಳಾ
ಬೆಂಗಳೂರು, ಜ.16: ಬಿಸಿನೀರಿನ ಗ್ಯಾಸ್ ಗೀಸರ್ ಸೋರಿಕೆಯಿಂದಾಗಿ ತಾಯಿ-ಮಗಳು ಉಸಿರುಗಟ್ಟಿ ಸಾವಿಗೀಡಾದ ಪ್ರಕರಣ ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಮನಗರ ಮೂಲದ ಮಂಗಳಾ(35), ಈಕೆಯ ಪುತ್ರಿ ಗೌತಮಿ (7) ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ರಾಮನಗರ ಮೂಲದ ಈ ಕುಟುಂಬ 15 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಚಿಕ್ಕಬಾಣಾವರದಲ್ಲಿ ನೆಲೆಸಿತ್ತು. ರವಿವಾರ
ಬೆಳಗ್ಗೆ ಮಂಗಳಾ ಅವರ ಪತಿ ನರಸಿಂಹಮೂರ್ತಿ ಕೆಲಸಕ್ಕೆಂದು ಹೊರಗೆ ಹೋಗಿದ್ದಾಗ ಮಗುವನ್ನು ಕರೆದುಕೊಂಡು ಸ್ನಾನಕ್ಕೆಂದು ಬಚ್ಚಲಕೋಣೆಗೆ ಹೋಗಿದ್ದರು.
ಅಲ್ಲಿ ಬಿಸಿನೀರಿಗಾಗಿ ಗ್ಯಾಸ್ ಗೀಸರ್ ಆನ್ ಮಾಡಲಾಗಿತ್ತು. ಆದರೆ ಗ್ಯಾಸ್ ಗೀಸರ್ನಿಂದ ಅನಿಲ ಸೋರಿಕೆ ಉಂಟಾಗಿದ್ದು, ಅದರಿಂದ ಉಸಿರುಗಟ್ಟಿ ತಾಯಿ-ಮಗಳು ಇಬ್ಬರೂ ಸಾವಿಗೀಡಾಗಿದ್ದಾರೆ ಎನ್ನಲಾಗಿದೆ.
ಮಾಲಕರ ಮನೆಯ ಮಹಿಳೆ ಮನೆ ಬಳಿ ಬಂದಾಗ ಇದು ಗಮನಕ್ಕೆ ಬಂದಿತ್ತು.ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ