varthabharthi


ಅಂತಾರಾಷ್ಟ್ರೀಯ

ಟೆಕ್ಸಾಸ್ ಒತ್ತೆಸೆರೆ ಪ್ರಕರಣ : ಬ್ರಿಟನ್‌ನಲ್ಲಿ ಇಬ್ಬರ ಬಂಧನ

ವಾರ್ತಾ ಭಾರತಿ : 18 Jan, 2022

ಲಂಡನ್, ಜ.17: ಅಮೆರಿಕದ ಟೆಕ್ಸಾಸ್‌ನಲ್ಲಿ 4 ಮಂದಿಯನ್ನು ಒತ್ತೆಸೆರೆಯಲ್ಲಿರಿಸಿದ್ದ ವ್ಯಕ್ತಿ ಬ್ರಿಟನ್ ಪ್ರಜೆ ಎಂದು ಅಮೆರಿಕದ ಅಧಿಕಾರಿಗಳು ರವಿವಾರ ಗುರುತಿಸಿರುವಂತೆಯೇ, ಪ್ರಕರಣಕ್ಕೆ ಸಂಬಂಧಿಸಿ ಬ್ರಿಟನ್‌ನ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಒತ್ತೆಸೆರೆ ಪ್ರಕರಣದ ಪ್ರಮುಖ ಆರೋಪಿಯನ್ನು ಬ್ರಿಟನ್ ಮೂಲದ ಮಲಿಕ್ ಫೈಸಲ್ ಅಕ್ರಮ್ ಎಂದು ಅಮೆರಿಕ ಅಧಿಕಾರಿಗಳು ಗುರುತಿಸಿದ್ದಾರೆ. ಇದಾದ ಕೆಲ ಗಂಟೆಗಳ ಬಳಿಕ ಬ್ರಿಟನ್‌ನ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿ ಸೌತ್ ಮ್ಯಾಂಚೆಸ್ಟರ್‌ನಲ್ಲಿ ಇಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಗ್ರೇಟರ್ ಮ್ಯಾಂಚೆಸ್ಟರ್ ಪೊಲೀಸರು ಹೇಳಿಕೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)