varthabharthi


ನಿಧನ

ಅಹ್ಮದುಲ್ಲಾ ಹಾರೂನ್

ವಾರ್ತಾ ಭಾರತಿ : 18 Jan, 2022

ಮಂಗಳೂರು : ನಗರದ ಜಪ್ಪು ಮೋರ್ಗನ್ಸ್ ಗೇಟ್ ನಿವಾಸಿ ಜಿ. ಮೊಹಮ್ಮದ್ ಹಾರೂನ್ ಸಾಹೇಬ್ (ಹಾರೂನ್ ಮಾಸ್ಟರ್) ಅವರ ಪುತ್ರ ಅಹ್ಮದುಲ್ಲಾ ಹಾರೂನ್ (77) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಸರಳ, ಸಜ್ಜನ, ಪರೋಪಕಾರಿ ವ್ಯಕ್ತಿತ್ವದ ಅವರು 1970ರಲ್ಲಿ ಗಲ್ಫ್ (ಕತರ್)ಗೆ ಹೋದ ಹಾರೂನ್ ಕುಟುಂಬದ ಮೊದಲ ಸದಸ್ಯರಾಗಿದ್ದರು. ಅಲ್ಲಿ ಊರಿನ ಹಲವು ಮಂದಿಗೆ ಉದ್ಯೋಗ ದೊರಕಿಸಿಕೊಡುವಲ್ಲಿ ನೆರವಾಗಿದ್ದಾರೆ. ಜಿದ್ದಾದಲ್ಲಿರುವಾಗ ಜಂಇಯ್ಯತುಲ್ ಫಲಾಹ್ ಸಂಘಟನೆಯ ಸ್ಥಾಪಕ ಸದಸ್ಯರಾಗಿದ್ದರು. 2000ರಲ್ಲಿ ಅವರು ನಿವೃತ್ತಿ ಪಡೆದು ಭಾರತಕ್ಕೆ ಮರಳಿದರು.

ಊರಿಗೆ ಮರಳಿದ ಬಳಿಕ ಬೋಳಾರ್ ಜುಮಾ ಮಸೀದಿಯ ಸಕ್ರಿಯ ಸದಸ್ಯರಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)