varthabharthi


ಉಡುಪಿ

ಎಸ್‌ಎಂಎ ಲೀಡ್ ‘ಎನ್’ ಗೈಡ್ ವಿಶೇಷ ತರಬೇತಿ ಶಿಬಿರ

ವಾರ್ತಾ ಭಾರತಿ : 18 Jan, 2022

ಉಡುಪಿ, ಜ.18: ಸುನ್ನೀ ಮ್ಯಾನೇಜ್ಮೆಂಟ್ ಅಸೋಸಿಯೇಷನ್ (ಎಸ್‌ಎಂಎ) ಕರ್ನಾಟಕ ರಾಜ್ಯ ಸಮಿತಿಯ ನಿರ್ದೇಶನ ಪ್ರಕಾರ ಉಡುಪಿ ಜಿಲ್ಲಾ ವ್ಯಾಪ್ತಿಯ ವಲಯ ಹಾಗೂ ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳ ಸಂಗಮ ಲೀಡ್ ‘ಎನ್’ ಗೈಡ್- 2021 ಕಾರ್ಯಕ್ರಮವು ಉಡುಪಿ ಅಜ್ಜರಕಾಡು ಸಂಸ್ಥೆಯ ಕಾರ್ಯಾಲಯದಲ್ಲಿ ನಡೆಯಿತು.

ಜಿಲ್ಲಾಧ್ಯಕ್ಷ ಮುಹಮ್ಮದ್ ಮನ್ಸೂರು ಕೋಡಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ ಆಕಳಬೈಲು ಹಾಜಿ ಇಸ್ಮಾಯಿಲ್ ಮುಸ್ಲಿಯಾರ್ ಪ್ರಾರ್ಥನೆಗೆ ನೇತೃತ್ವ ನೀಡಿದರು. ರಾಜ್ಯ ನಾಯಕರಾದ ಅಬ್ದುರ್ರಶೀದ್ ಕಾಮಿಲ್ ಸಖಾಫಿ ಮಜೂರು ಸಭೆಯನ್ನು ಉದ್ಘಾಟಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಹಾಗೂ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ಹಾಜಿ ಕೊಡುಂಗಾಯಿ ವಿವಿಧ ವಿಯಗಳ ಬಗ್ಗೆ ತರಬೇತಿ ನೀಡಿದರು.

ಎಸ್‌ಜೆಎಂ ಜಿಲ್ಲಾಧ್ಯಕ್ಷ ಅಬ್ದುರ್ರಝಾಕ್ ಖಾಸಿಮಿ ಕಾಪು, ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಲ್ಕಟ್ಟ ಅಬ್ದುರ್ರಹ್ಮಾನ್ ರಝ್ವಿ ಶುಭಹಾರೈಸಿದರು. ರಾಜ್ಯ ನಾಯಕ ಮೂಸಾ ಹಾಜಿ ಮುಡಿಪು ಹಾಗೂ ಜಿಲ್ಲೆಗೊಳಪ್ಪಟ್ಟ ಎಲ್ಲಾ ಘಟಕಗಳ ಪದಾಧಿಕಾರಿಗಳು ಹಾಗೂ ಜಿಲ್ಲಾ ನಾಯಕರು ಹಾಜರಿದ್ದರು. ಬಳಿಕ ಅಸ್ಸೆಯ್ಯಿದ್ ರಂಗನಕೆರೆ ತಂಙಲ್ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಿತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೊಂಬಾಳಿ ಕೆ.ಎಂ.ಎಚ್.ಝುಹುರಿ ಸ್ವಾಗತಿಸಿ, ಕಾರ್ಯದರ್ಶಿ ಎನ್.ಸಿ.ರಹೀಂ ಹೊಸ್ಮಾರು ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)