varthabharthi


ದಕ್ಷಿಣ ಕನ್ನಡ

ನಾರಾಯಣ ಗುರು ಸ್ತಬ್ಧಚಿತ್ರ ವಿವಾದ; ಮಂಗಳೂರು ತಾಲೂಕು ಬಿಲ್ಲವ ಸಂಘದಿಂದ ರಾಷ್ಟ್ರಪತಿಗೆ ಮನವಿ

ವಾರ್ತಾ ಭಾರತಿ : 18 Jan, 2022

ಮಂಗಳೂರು, ಜ.18: ಗಣರಾಜ್ಯೋತ್ಸವದ ಪರೇಡ್‌ನಲ್ಲಿ ನಾರಾಯಣ ಗುರು ಸ್ತಬ್ಧಚಿತ್ರ ಪ್ರದರ್ಶಿಸಲು ಅವಕಾಶ ನಿರಾಕರಿಸಿದ ಕೇಂದ್ರ ಸರಕಾರದ ನಿಲುವು ಖಂಡಿಸಿ ಮಂಗಳೂರು ತಾಲೂಕು ಬಿಲ್ಲವ ಸಂಘದ ನಿಯೋಗವು ಮಂಗಳವಾರ ದ.ಕ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದೆ.

ಕೇರಳ ರಾಜ್ಯ ಕಳುಹಿಸಿದ ಪ್ರಸ್ತಾವವನ್ನು ಕೇಂದ್ರವು ನಯವಾಗಿ ತಿರಸ್ಕರಿಸಿದೆ. ಈ ಮೂಲಕ ಹಿಂದುಳಿದ ವರ್ಗಗಳ ಉದ್ಧಾರಕನ ಅವಮಾನಿಸಿದಂತಾಗಿದೆ ಎಂದು ನಿಯೋಗ ತಿಳಿಸಿದೆ.

ಸಂಘದ ಅಧ್ಯಕ್ಷ ಜಿತೇಂದ್ರ ಜೆ. ಸುವರ್ಣ, ಗೌರವಾಧ್ಯಕ್ಷ ರಂಜನ್ ಮಿಜಾರು, ಕಾರ್ಯದರ್ಶಿ ಲೋಕನಾಥ ಪೂಜಾರಿ ಬಿ., ಖಜಾಂಚಿ ಪುರುಷೋತ್ತಮ ಪೂಜಾರಿ, ಪದಾಧಿಕಾರಿಗಳಾದ ಸುರೇಶ್ಚಂದ್ರ ಕೋಟ್ಯಾನ್, ಬಿ.ಪಿ. ದಿವಾಕರ್, ರಂಜಿತ್ ಬರ್ಕೆ, ನಾಗೇಶ್ ಕದ್ರಿ, ರಾಘವ ಕೆ. ಕದ್ರಿ, ಪ್ರಜ್ವಲ್ ಮಿಜಾರು, ಸಚಿನ್ ಕದ್ರಿ, ಅವಿನಾಶ್ ಬಂಗೇರ, ಪ್ರಮೀಳಾ ಈಶ್ವರ್, ಶ್ರೀಜಾ ನಿಯೋಗದಲ್ಲಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)