varthabharthi


ಉಡುಪಿ

ಪರ್ಯಾಯ: ಪೊಲೀಸ್ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ

ವಾರ್ತಾ ಭಾರತಿ : 18 Jan, 2022

ಉಡುಪಿ, ಜ.18: ಪರ್ಯಾಯ ಮಹೋತ್ಸವದ ಬಂದೋಬಸ್ತ್ ಕರ್ತವ್ಯ ದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರಿಗೆ ದುಷ್ಕರ್ಮಿಗಳು ಉರುಳಾಟ ನಡೆಸಿ ಗಾಯಗೊಳಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಘಟನೆ ರಥಬೀದಿಯ ಕಾಣಿಯೂರು ಮಠದ ಎದುರು ಜ.17ರಂದು ರಾತ್ರಿ 11ಗಂಟೆ ಸುಮಾರಿಗೆ ನಡೆದಿದೆ.

ಜನರಿಗೆ ಕೀಟಲೆ ನೀಡುತ್ತಿದ್ದ ಇಬ್ಬರಿಗೆ ಉಡುಪಿ ನಗರ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಚೇತನ್ ಎಸ್., ತೊಂದರೆ ಕೊಡಬಾರದೆಂದು ತಿಳಿಸಿದರು. ಇದಕ್ಕೆ ದುಷ್ಕರ್ಮಿಗಳು ನೀನು ಯಾವ ಪೊಲೀಸ್ ನಮಗೆ ನೀನು ಹೇಳುವುದು ಬೇಡ ಎಂದು ಹೇಳಿ ಕರ್ತವ್ಯದಲ್ಲಿದ್ದ ಚೇತನ್‌ರನ್ನು ದೂಡಿದರು. ಇದರಿಂದ ನೆಲದ ಮೇಲೆ ಕವಚಿ ಬಿದ್ದ ಅವರೊಂದಿಗೆ ಉರುಳಾಟ ನಡೆಸಿದರೆನ್ನಲಾಗಿದೆ. ಇದರ ಪರಿಣಾಮ ಚೇತನ್ ಗಾಯಗೊಂಡರೆಂದು ತಿಳಿದುಬಂದಿದೆ. ಈ ಬಗ್ಗೆ ಚೇತನ್ ನೀಡಿದ ದೂರಿನಂತೆ ದುಷ್ಕರ್ಮಿಗಳ ವಿರುದ್ಧ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)