varthabharthi


ಉಡುಪಿ

ಬೈಂದೂರು; ಹೊಂಡಕ್ಕೆ ಬಿದ್ದ ಕಾರು: ಮಹಿಳೆ ಮೃತ್ಯು, ಚಾಲಕ ಸಹಿತ ಮೂವರಿಗೆ ಗಾಯ

ವಾರ್ತಾ ಭಾರತಿ : 18 Jan, 2022

ಬೈಂದೂರು, ಜ.18: ರಸ್ತೆ ಅಡ್ಡ ಬಂದ ಕಾಡು ಹಂದಿಗಳನ್ನು ತಪ್ಪಿಸುವ ಭರದಲ್ಲಿ ಕಾರೊಂದು ಹೊಂಡಕ್ಕೆ ಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಪಡುವರಿ ಗ್ರಾಮದ ಸೆಳ್ಳೆಕುಳ್ಳಿ ಬಳಿ ಜ.18ರಂದು ಬೆಳಗಿನ ಜಾವ 5 ಗಂಟೆ ಸುಮಾರಿಗೆ ನಡೆದಿದೆ.

ಮೃತರನ್ನು ಗುಲಾಬಿ ಪ್ರಭು(70) ಎಂದು ಗುರುತಿಸಲಾಗಿದೆ. ಕಾರು ಚಾಲಕ ಕಿರಣ ಪ್ರಭು, ಹಿಂಬದಿ ಸೀಟಿನಲ್ಲಿದ್ದ ಕವಿತಾ ಪ್ರಭು, ರೇಷ್ಮಾ ಪ್ರಭು ಎಂಬವರು ಗಾಯಗೊಂಡು ಕುಂದಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೈಂದೂರಿನಿಂದ ಭಟ್ಕಳ ಕಡೆಗೆ ಹೋಗುತ್ತಿದ್ದ ಕಾರಿಗೆ 2-3 ಕಾಡು ಹಂದಿಗಳು ಅಡ್ಡ ಬಂತೆನ್ನಲಾಗಿದೆ. ಇದನ್ನು ತಪ್ಪಿಸುವುದಕ್ಕಾಗಿ ಚಾಲಕ, ಕಾರನ್ನು ರಸ್ತೆಯ ಎಡ ಬದಿಗೆ ಚಲಾಯಿಸಿದ ಪರಿಣಾಮ, ಕಾರು ನಿಯಂತ್ರಣ ತಪ್ಪಿಹೊಂಡಕ್ಕೆ ಹಾರಿ ಮಣ್ಣಿನ ಧರೆಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಕಾರಿನಲ್ಲಿದ್ದ ಗುಲಾಬಿ ಪ್ರಭು ಗಂಭೀರವಾಗಿ ಗಾಯಗೊಂಡಿದ್ದು, ಬೈಂದೂರು ಸರಕಾರಿ ಸಮುದಾಯ ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರು.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)