ದಕ್ಷಿಣ ಕನ್ನಡ
ಅಖಿಲ ಭಾರತ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಶ್ರೇಯಸ್ ಗೆ ಚಿನ್ನ, ಕಂಚು ಪದಕ
ವಾರ್ತಾ ಭಾರತಿ : 18 Jan, 2022

ಮಂಗಳೂರು: ಮೂಡಬಿದ್ರೆಯ ಸಮಾಜ ಮಂದಿರದಲ್ಲಿ ಜ.13ರಂದು ನಡೆದ ಅಖಿಲ ಭಾರತ ಕರಾಟೆ ಸ್ಪರ್ಧೆಯ ಕಿರಿಯರ ವಿಭಾಗದಲ್ಲಿ ಶ್ರೇಯಸ್ ರಮೇಶ್ ಖಾರ್ವಿ ಒಂದು ಚಿನ್ನ ಮತ್ತು ಒಂದು ಕಂಚಿನ ಪದಕವನ್ನು ಗಳಿಸಿದ್ದಾರೆ.
ಉಪ್ಪುಂದ ಉದ್ಯಮಿ ರಮೇಶ್ ಖಾರ್ವಿ ಮತ್ತು ಅರೆಹೊಳೆಯ ಶಿಕ್ಷಕಿ ಸವಿತಾ ರಮೇಶ್ ರವರ ಪುತ್ರ ಶಿರೂರಿನ ಗ್ರೀನ್ ವ್ಯಾಲಿ ನ್ಯಾಶನಲ್ ಸ್ಕೂಲ್ ನ 4ನೆ ತರಗತಿಯ ವಿದ್ಯಾರ್ಥಿ ಶ್ರೇಯಸ್ ಈ ಹಿಂದೆ ನಡೆದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಒಂದು ಚಿನ್ನ ಮತ್ತು ಒಂದು ಬೆಳ್ಳಿ ಯ ಪದಕ ಗಳಿಸಿರುವ ಸಾಧನೆ ಮಾಡಿರುತ್ತಾನೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)