varthabharthi


ಉಡುಪಿ

ಯುವತಿ ನಾಪತ್ತೆ

ವಾರ್ತಾ ಭಾರತಿ : 19 Jan, 2022

ಉಡುಪಿ, ಜ.19: ಕುಂದಾಪುರ ತಾಲೂಕು ಉಳ್ತೂರು ಗ್ರಾಮದ ಕಳ್ಳಿಗುಡ್ಡೆಯ ನಿವಾಸಿ ಚಂದನಾ (19) ಎಂಬ ಯುವತಿಯು ಜನವರಿ 11ರಂದು ಮನೆಯಿಂದ ಹೋದವರು ವಾಪಸು ಬಾರದೆ ನಾಪತ್ತೆಯಾಗಿದ್ದಾರೆ.

5 ಅಡಿ ಎತ್ತರ, ಸಾಧರಣ ಮೈಕಟ್ಟು, ಬಿಳಿ ಮೈ ಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೋಟ ಪೊಲೀಸ್ ಠಾಣೆ ದೂ.ಸಂಖ್ಯೆ : 0820-2564155, ಮೊ. ನಂಬರ್ :9480805454, ನಗರ ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿ ದೂ.ಸಂಖ್ಯೆ :0820-2561966, ಮೊ.ನಂಬರ್ :9480805432 ಅನ್ನು ಸಂಪರ್ಕಿಸುವಂತೆ ಕೋಟ ಪೊಲೀಸ್ ಠಾಣಾ ಉಪನಿರೀಕ್ಷಕರ ಪ್ರಕಟಣೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)