varthabharthi


ಉಡುಪಿ

ಗ್ಯಾರೇಜ್ ಮಾಲಕ ನಾಪತ್ತೆ

ವಾರ್ತಾ ಭಾರತಿ : 19 Jan, 2022

ಮಲ್ಪೆ, ಜ.19: ಕನ್ನರಪಾಡಿಯಲ್ಲಿನ ತನ್ನ ಗ್ಯಾರೇಜ್‌ಗೆ ಜ.18ರಂದು ಹೋಗಿದ್ದ ಅಜ್ಜರಕಾಡು ನಿವಾಸಿ ನಾಗೇಶ (47) ಎಂಬವರು ಈವರೆಗೆ ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ.

ಗ್ಯಾರೇಜ್ನಲ್ಲಿ ನಾಗೇಶರವರ ಮೊಬೈಲ್ ಇದ್ದು ಅದರ ಮೇಲೆ ಚೀಟಿ ಕಂಡು ಬಂದಿದೆ. ಈ ಚೀಟಿಯಲ್ಲಿ ಮೊಬೈಲ್ ಪೋನ್ ಲಾಕ್ ಹಾಗೂ ನಾನು ಒಂದು ವಾರ ಇರುವುದಿಲ್ಲ ಯಾರೂ ಕೇಳಿದರೂ ಗೊತ್ತಿಲ್ಲ ಎಂದು ಹೇಳಿ ಎಂಬುದಾಗಿ ಬರೆದಿಡಲಾಗಿತ್ತು. ಇವರು ತನ್ನ ಬ್ರೀಜಾ ಕಾರಿನೊಂದಿಗೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)